ಸುಬ್ರಹ್ಮಣ್ಯ ; ರಾಜ್ಯದ ಶ್ರೀಮಂತ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಈ ಹಿಂದಿನ ಸರಕಾರ ನೇಮಿಸಿದ್ದ ಅಭಿವ್ರದ್ದಿ ಸಮಿತಿ ಕೆಲ ಸದಸ್ಯರನ್ನು ಉಳಿಸಿಕೊಂಡು ಹೊಸದಾಗಿ ನಾಲ್ಕು ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸಿ 9 ಮಂದಿಯ ವ್ಯವಸ್ಥಾಪನ ಸಮಿತಿ ರಚಿಸಿ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ದೇಗುಲದ ಸಿಇಒ ಸೇರಿಸಿ 6 ಜನರ ಅಭಿವೃದ್ಧಿ ಸಮಿತಿ ರಚನೆಯಾಗಿತ್ತು., ಮುಂದಿನ 3 ವರ್ಷಗಳ ಅವಧಿಗೆ ಈ ಸಮಿತಿ ರಚಿಸಲಾಗಿತ್ತು ಪಿ.ಜಿ.ಎಸ್.ಪ್ರಸಾದ್, ಪ್ರಸನ್ನ, ಎಸ್.ಮೋಹನ್ ರಾಮ್, ವನಜಾ ಭಟ್.ಮನೋಹರ ರೈ, ಸಮಿತಿ ಸದಸ್ಯರಾಗಿದ್ದರು. ಶಾಸಕ ಎಸ್ ಅಂಗಾರ ಅಧ್ಯಕ್ಷರಾಗಿದ್ದರು.
ಇದೀಗ ಅರ್ಚಕ ಸೀತರಾಮ ಎಡಪಡಿತ್ತಾಯ, ಶೋಭಾ ಗಿರಿಧರ,ಶ್ರಿವತ್ಸ ಬೆಂಗಳೂರು,ಮಲೆಕುಡಿಯ ಸಮುದಾಯದ ಲೊಕೇಶ್ ಮುಂಡಕಜೆ ಹೊಸದಾಗಿ ಸಮಿತಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ :ನಟ ದ್ವಾರಕೀಶ್ ಮನೆ ಖರೀದಿಸಿದ ರಿಷಬ್ ಶೆಟ್ಟಿ
ಈ ಹಿಂದೆ ಸರಕಾರ ರಚಿಸಿದ ಮೂರು ವರ್ಷಗಳ ಅವಧಿಯ ಅಭಿವೃದ್ಧಿ ಸಮಿತಿ ಬದಲಿಗೆ ಪೂರ್ಣಾವಧಿ ವ್ಯವಸ್ಥಾಪನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.