Advertisement
ಜಾತ್ರೆಯ ಕೊನೆಯ ಉತ್ಸವವಾಗಿ ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಿತು. ದೇಗುಲದ ಹೊರಾಂಗಣದ ಸುತ್ತ ನೀರನ್ನು ಬೆಳಗ್ಗೆಯಿಂದಲೇ ತುಂಬಿಸಲಾಯಿತು. ನೀರು ತುಂಬಿಸಿದ ಬಳಿಕ ರಾತ್ರಿ ಮಹಾಪೂಜೆ ನಡೆಯಿತು.
Related Articles
Advertisement
ದೇವಸ್ಥಾನದ ಆನೆ ಯಶಸ್ವಿಯು ಹೊರಾಂಗಣದಲ್ಲಿ ತುಂಬಿಸಿದ್ದ ನೀರಿನಲ್ಲಿ ನೀರಾಟವಾಡಿ ಸಂಭ್ರಮಿಸಿತು. ಹೊರಾಂಗಣದ ನೀರಿನಲ್ಲಿ ನೀರಾಟವಾಡಿ ಪುಟಾಣಿ ಮಕ್ಕಳ ಮೇಲೆ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ ಖುಷಿ ಪಟ್ಟಿತು. ಆನೆಯ ಜತೆ ನೀರಾಟವಾಡಿ ಮಕ್ಕಳು, ಭಕ್ತರು ಸಂಭ್ರಮಿಸಿದರು.
ಜಾತ್ರೆ ಅವ ಧಿಯಲ್ಲಿ ಸ್ಥಗಿತಗೊಂಡಿದ್ದ ಸರ್ಪ ಸಂಸ್ಕಾರ ಸೇವೆ ಡಿ. 10ರಿಂದ ಆರಂಭಗೊಳ್ಳಲಿದೆ. ಮಂಗಳವಾರದಿಂದ ದೇವಸ್ಥಾನದಲ್ಲಿ ಎಲ್ಲ ಸೇವೆಗಳು ಸಂಪ್ರದಾಯದಂತೆ ನಡೆಯಲಿವೆ.