Advertisement

Kukke Subrahmanya Temple ಕಾಡಾನೆ ಸಂಚಾರ ಹಿನ್ನಲೆ: ಸೂಚನೆ

11:34 PM Dec 02, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ರವಿವಾರ ರಾತ್ರಿ ಕಾಡಾನೆ ಸಂಚರಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ದೇವಳದ ವತಿಯಿಂದ ಭಕ್ತರು ಹಾಗೂ ಸಾರ್ವಜನಿಕರು ಜಾಗೃತಿ, ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

Advertisement

ಸೋಮವಾರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸುಬ್ರಹ್ಮಣ್ಯ ಹಾಗೂ ಕಿದು ಮೀಸಲು ಅರಣ್ಯ ಭಾಗಗಳಲ್ಲಿ ಗಸ್ತು ಸಂಚರಿಸಿ ಕಾಡಾನೆ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಆ ಪ್ರಕಾರ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಆನೆಯು ಸುಬ್ರಹ್ಮಣ್ಯದಿಂದ ಹೊರಟು ಕೆದಿಲ-ಕೋಟೆ ಮಾರ್ಗವಾಗಿ ಕಿದು ಮೀಸಲು ಅರಣ್ಯ ಭಾಗದಲ್ಲಿ ಕಡೆಯದಾಗಿ ಕಂಡು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ಕತ್ತಲು ಪ್ರದೇಶದಲ್ಲಿ, ನದಿ ತೀರದಲ್ಲಿ ಹಾಗೂ ಕಾಡಂಚಿನಲ್ಲಿ ಅವಾವಶ್ಯಕವಾಗಿ ತೆರಳದಂತೆ ಸೂಚಿಸಲಾಗಿದೆ
ಕೋರಿದೆ.

ಅರಣ್ಯ ಇಲಾಖೆಯ 4 ಸಿಬ್ಬಂದಿಗಳು ಸಂಜೆ 6 ಗಂಟೆಯಿಂದ ಸುಬ್ರಹ್ಮಣ್ಯದಲ್ಲಿ ರಾತ್ರಿ ಗಸ್ತು ಕೆಲಸ ನಿರ್ವಹಿಸುತ್ತಾರೆ. ಕಾಡಾನೆ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಗಸ್ತು ಸಿಬಂದಿ ಅಥವಾ ಅರಣ್ಯ ಇಲಾಖೆಯನ್ನು ಕೂಡಲೇ ಸಂಪರ್ಕಿಸಬೇಕಾಗಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್‌ ಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next