Advertisement
ದೇವಸ್ಥಾನದ ಕಾರ್ಯನಿರ್ವ ಹಣಾಧಿಕಾರಿ ರವೀಂದ್ರ ಎಂ. ಎಚ್. ಅವರನ್ನು ಸೋಮವಾರ ಭೇಟಿ ಮಾಡಿದ ಮಠದ 50ಕ್ಕೂ ಅಧಿಕ ಸಿಬಂದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ಕುಕ್ಕೆಯು ಸಾರ್ವಜನಿಕ ದೇಗುಲವಾಗಿದ್ದು, ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿದೆ. ದೇವಸ್ಥಾನದ ಗೋಪುರದ ಮುಂದೆ ಇದ್ದ ಮಠದ ಸಿಬಂದಿ ಕುಮಾರ ಬನ್ನಿಂತಾಯರನ್ನು ಏಕಾಏಕಿ ಆಡಳಿತ ಕಚೇರಿಯೊಳಗೆ ಕರೆದೊಯ್ದು ಹಲ್ಲೆ ನಡೆಸಿರುವುದು ಖಂಡನೀಯ. ವ್ಯವಸ್ಥಾಪನ ಸಮಿತಿಯು ದೇಗುಲಕ್ಕೆ ಬರುವ ಭಕ್ತರ ಮೂಲಸೌಕರ್ಯ ಈಡೇರಿಕೆ ಸಹಿತ ಅಗತ್ಯ ವ್ಯವಸ್ಥೆ ಕಲ್ಪಿಸಲು ಸರಕಾರದಿಂದ ನೇಮಕಗೊಂಡ ಸಮಿತಿಯಾಗಿದೆ. ಸಮಿತಿ ಸದಸ್ಯರೇ ಹಲ್ಲೆಯಲ್ಲಿ ಭಾಗಿಯಾಗಿರುವುದು ಗೂಂಡಾಗಿರಿ ವರ್ತನೆಯಾಗಿದೆ. ಅವರ ವಿರುದ್ಧ ಕ್ರಮ ಜರಗಿಸಬೇಕು. ಪುಣ್ಯ ಕ್ಷೇತ್ರದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯಲು ಅವಕಾಶ ನೀಡಬಾರದು ಎಂದರು.
ಕುಮಾರ ಬನ್ನಿಂತಾಯರಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾದ ಮಹೇಶ್‌ಕುಮಾರ್ ಕರಿಕ್ಕಳ, ಗುರುಪ್ರಸಾದ್ ಪಂಜ ಹಾಗೂ ಪ್ರಶಾಂತ್ ಭಟ್ ಮಾಣಿಲ ಅವರಿಗೆ ಸುಳ್ಯ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.