Advertisement
ಮಹಾ ಶಿವರಾತ್ರಿ ಅಂಗವಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಾರೆ. ಮರುದಿನ ನೇರವಾಗಿ ಕುಕ್ಕೆಗೆ ಆಗಮಿಸುವುದು ವಾಡಿಕೆ. ಭಕ್ತರು ಕುಮಾರಧಾರಾ ನದಿಯಲ್ಲಿ ಮಿಂದು ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಬಂದು ಶ್ರೀ ದೇವರ ದರುಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿದರು.
ಧರ್ಮಸ್ಥಳ – ಕುಕ್ಕೆ ಸುಬ್ರಹ್ಮಣ್ಯ ಮಧ್ಯೆ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿತ್ತು. ಎಲ್ಲ ಬಸ್‌ಗಳಲ್ಲೂ ಪ್ರಯಾಣಿಕರು ತುಂಬಿದ್ದರು. ಆದರೆ ಸುಬ್ರಹ್ಮಣ್ಯದಿಂದ ಸಕಲೇಶಪುರ, ಹಾಸನ ಸೇರಿದಂತೆ ಇತರೆಡೆಗೆ ಬಸ್‌ಗಳ ಸಂಖ್ಯೆ ಕಡಿಮೆ ಇದ್ದ ಪರಿಣಾಮ ಯಾತ್ರಿಕರಿಗೆ ತೊಂದರೆಯಾಗಿದ್ದು, ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆ ಅಸಮಾಧಾನ ವ್ಯಕ್ತ ಪಡಿಸಿದರು. ಪೊಲೀಸರು ಆಗಮಿಸಿ ಪ್ರಯಾಣಿಕರನ್ನು ಸಮಾಧಾನಿಸಿದರು. ಬಳಿಕ ಕೆಎಸ್ಸಾರ್ಟಿಸಿ ಅಧಿಕಾರಿಗಳು ಬೇಡಿಕೆಯ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಿತು.