ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ಸ್ಮತಿ ಅವರು ಕಿರುಷಷ್ಠಿ ಮಹೋತ್ಸವದ ಕಾರ್ತಿಕ ವೇದಿಕೆಯಲ್ಲಿ “ಆಧುನಿಕ ಭಾರತ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ವಿಷಯವಾಗಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಾಂಜಲಿ ಅವರ ಪ್ರಶ್ನೆಗೆ ಈ ಉತ್ತರ ನೀಡಿದರು.
Advertisement
ಒಬ್ಬ ನಟಿ ಮತ್ತು ರಾಜಕಾರಣಿಯಾಗಿ ತಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಿದ್ದೀರಿ? ಎಂಬ ಪ್ರಶ್ನೆಗೆ, ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತೆ. ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಇವು ಜೀವನ ಮೌಲ್ಯ, ದೇಶ ಸೇವೆಗೆ ಪ್ರೇರಣೆ ನೀಡಿವೆ. ರಾಜಕಾರಣಿಯಾಗಿ ದೇಶದ ಜನತೆಯ ಸೇವೆ ಮಾಡುತ್ತಿದ್ದೇನೆ. ಆರಂಭದಲ್ಲಿ ಪತ್ರಕರ್ತೆಯಾಗಿದ್ದೆ. ಆರಂಭಿಕ ವೇತನ ಕೇವಲ 200 ರೂ. ಇತ್ತು. 2001-2002ರಲ್ಲಿ ನನ್ನ 24ರ ಹರೆಯದಲ್ಲಿ ಡಬ್ಲೂಎಚ್‌ಒನ ಒಆರ್‌ಎಸ್ ಕಾರ್ಯಕ್ರಮದ ಭಾರತದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೆ. 2003ರಲ್ಲಿ ಬಿಜೆಪಿಗೆ ಬಂದೆ ಎಂದರು.
ಮುಂದಿನ ವರ್ಷ ಭಾರತದಲ್ಲಿ ಜಿ20 ಸಮ್ಮೇಳನ ನಡೆಯಲಿದೆ. ಇದರಲ್ಲಿ ಮಹಿಳಾ ಸಶಕ್ತೀಕರಣ ಮತ್ತು ಸ್ವಾತಂತ್ರ್ಯದ ಬಗ್ಗೆ ಭಾರತ ತೆಗೆದುಕೊಳ್ಳುವ ನಿಲುವು ಏನು? ಎಂಬುದಕ್ಕೆ ಮಹಿಳಾ ಸಶಕ್ತೀಕರಣ ಮತ್ತು ಸ್ವಾತಂತ್ರ್ಯಕ್ಕೆ ಎಲ್ಲ ರಾಷ್ಟ್ರಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಭಾರತದ ನಿಲುವನ್ನು ಪ್ರಸ್ತಾವಿಸಲಿದೆ. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿದಾಗ ಬದುಕಿನ ಒತ್ತಡ ಕಡಿಮೆ ಮಾಡಬಹುದು. ಜನಔಷಧ ಕೇಂದ್ರಗಳಲ್ಲಿ ಕೇವಲ ಒಂದು ರೂ.ಗೆ ನ್ಯಾಪಿRನ್‌ಗಳನ್ನು ಕೊಡಲಾಗುತ್ತಿದ್ದು ಹೆಣ್ಣು ಮಕ್ಕಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದ ಅವರು, ಅಗ್ನಿಪಥ್ ಯೋಜನೆ ಯುವ ಜನಾಂಗಕ್ಕೆ ದೇಶ ಸೇವೆಗೆ ಪ್ರೇರಣೆ ನೀಡುತ್ತದೆ ಎಂದರು.
Related Articles
Advertisement
ಸಮಸ್ಯೆಯಾದರೆ ತತ್‌ಕ್ಷಣ ಕರೆ ಮಾಡಿಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ತಮ್ಮನ್ನು ಸಂಪರ್ಕಿಸುವ ಅವಕಾಶ ಇದೆಯೇ? ಎಂಬ ಕನ್ನಿಕಾ ಅವರ ಪ್ರಶ್ನೆಗೆ, “ನನ್ನ ಮೈಲ್ ಐಡಿ ಮತ್ತು ದೂರವಾಣಿ ಸಂಖ್ಯೆ ನನ್ನ ವೆಬ್ ಸೈಟ್‌ನಲ್ಲಿದೆ. ಅದಕ್ಕೆ ಕರೆ ಮಾಡಿದರೆ ತತ್‌ಕ್ಷಣ ಸ್ಪಂದಿಸುತ್ತೇನೆ. ಉಚಿತ ಸಹಾಯವಾಣಿ 1098ಕ್ಕೂ ಕರೆ ಮಾಡಬಹುದು. ಪ್ರತೀ ದಿನ ಸುಮಾರು 70 ಲಕ್ಷ ಕರೆಗಳು ಇದಕ್ಕೆ ಬರುತ್ತವೆ. ಎಲ್ಲದಕ್ಕೂ ಸಮರ್ಪಕವಾಗಿ ಸ್ಪಂದಿಸಲಾಗುತ್ತದೆ’ ಎಂದರು. ಒತ್ತಡ ಶಮನಕ್ಕೆ ಯೋಗ ಮಾಡಿ
ಮನಸ್ಸಿನ ಒತ್ತಡ ಹಾಗೂ ಕೋಪವನ್ನು ಯಾವ ರೀತಿ ಕಮ್ಮಿ ಮಾಡುವುದು ಎಂಬ ಪ್ರಶ್ನೆಗೆ ಬೆಳಗ್ಗೆ ಎದ್ದು ಯೋಗ ಮಾಡಿ ಎಂದರು.