Advertisement
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಶಿಲ್ಪಿ ರಾಜಗೋಪಾಲ ನೇತೃತ್ವದಲ್ಲಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. ನವರಾತ್ರಿ ಆರಂಭವಾಗುವ ಸೆ. 29ರ ರಾತ್ರಿ ಚಿತ್ತ ನಕ್ಷತ್ರದ ಶುಭ ಮುಹೂರ್ತದಲ್ಲಿ ರಥವನ್ನು ಕುಕ್ಕೆಗೆ ತರಲಾಗುತ್ತಿದೆ. ಅತ್ಯಲ್ಪ ಅವಧಿಯ ಏಳು ತಿಂಗಳಲ್ಲಿ ಶಿಲ್ಲಿಗಳ ಕಲಾ ನೈಪುಣ್ಯದಿಂದ ಹೊರಹೊಮ್ಮಿದ ರಥ ಸುಂದರವಾಗಿ ಮೂಡಿಬಂದಿದೆ.ನೆಲದಿಂದ ರಥದ ಜಿಡ್ಡೆಯ ತನಕ 17 ಅಡಿ ಎತ್ತರ, ಅಗಲ, ಉದ್ದ ಇರಲಿದೆ. 6 ಚಕ್ರಗಳಿದ್ದು ಚಕ್ರ 8 ಅಡಿ ಎತ್ತರವಿದೆ. ರಥ ನೆಲದಿಂದ ಕಲಶದ ತುದಿವರೆಗೆ 63 ಅಡಿ ಎತ್ತರವಿರುತ್ತದೆ. ರಥ ಅಂದಾಜು 22 ಟನ್ ಭಾರವಿರಲಿದೆ. 16 ಅಂತಸ್ತುಗಳನ್ನು ಹೊಂದಿದ್ದು, ವಿವಿಧ ಜಾತಿಯ 2000 ಸಿಎಫ್ಎಫ್ ಮರ ಬಳಸಿಕೊಳ್ಳಲಾಗಿದೆ. ಉತ್ತರ ಭಾರತದಿಂದ ಸಾಗುವಾನಿ, ಗುಜರಾತಿನಿಂದ ಬೋಗಿ ಮರ ಹಾಗೂ ಸುಬ್ರಹ್ಮಣ್ಯ ಪ್ರಾಂತದಿಂದ ಕಿಲಾರ್ ಬೋಗಿ ಮರವನ್ನು ಬಳಸಿಕೊಳ್ಳಲಾಗಿದೆ. ರಥದಲ್ಲಿ ಚತುರ್ವಂಶಿ ವಿಗ್ರಹ, ಶಿವ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಲಿಗಳು, ಅಷ್ಟ ದಿಕಾ³ಲರು, ಮಹಾಭಾರತ, ಪಾರ್ವತಿ ಕಲ್ಯಾಣ, ದಕ್ಷ ಯಜ್ಞ, ಪುತ್ರ ಕಾಮೇಷ್ಠಿ ಯಾಗ ಹಾಗೂ ಪ್ರಪಂಚದ ಸಕಲ ಜೀವರಾಶಿಗಳಿರುವ ಸಹಸ್ರಾರು ಚಿತ್ರಗಳ ಕೆತ್ತನೆಯಿಂದ ಕೂಡಿದೆ. ದೇವತೆಗಳು ಹಾಗೂ ದೇವರನ್ನು ಅತ್ಯಂತ ನಾಜೂಕಾಗಿ ಕೆತ್ತಲಾಗಿದ್ದು, ರಥ ಗಮನ ಸೆಳೆಯುತ್ತಿದೆ.
Related Articles
Advertisement
ಅನುಮತಿ ಪ್ರಕ್ರಿಯೆನಿರೀಕ್ಷಿತ ಆವಧಿಯಲ್ಲಿ ರಥ ಸುಂದರ ರೂಪ ಪಡೆದು ಹೊರಹೊಮ್ಮಿದೆ. ಕೋಟೇಶ್ವರದಿಂದ ರಥವನ್ನು ಕುಕ್ಕೆಗೆ ತರುವ ಕುರಿತು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಇಲಾಖಾವಾರು ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.
– ನಿತ್ಯಾನಂದ ಮುಂಡೋಡಿ
ಅಧ್ಯಕ್ಷರು, ಕುಕ್ಕೆ ದೇಗುಲ ವ್ಯವಸ್ಥಾಪನ ಸಮಿತಿ 116ನೇ ರಥ
1969ರಲ್ಲಿ ರಥ ನಿರ್ಮಾಣ ಕೆಲಸ ಆರಂಭಿಸಿದ್ದೆವು. ಇಂದು 116ನೇ ರಥವಾಗಿ ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮರಥ ನಿರ್ಮಿಸಿ ಕೊಡುತ್ತಿದ್ದೇವೆ. ಇದೊಂದು ಅತ್ಯದ್ಭುತ ಅನುಭವ ನೀಡಿದೆ. ಶೀಘ್ರ ಹಸ್ತಾಂತರಿಸುತ್ತಿದ್ದೇವೆ.
– ರಾಜಗೋಪಾಲ
ರಥದ ಶಿಲ್ಪಿ, ಕೊಟೇಶ್ವರ ರಥ ಸಮರ್ಪಣೆ ವಿಳಂಬ
ರಥ ಕುಕ್ಕೆಗೆ ಅಕ್ಟೋಬರ್‌ನಲ್ಲಿ ತಲುಪಿದರೂ ರಥ ಸಮರ್ಪಣೆಗೆ ದೀಪಾವಳಿ ತನಕ ಕಾಯಬೇಕಿದೆ. ದೀಪಾವಳಿ ಸಂದರ್ಭ ದೇವರ ಉತ್ಸವಗಳು ಬೀದಿಗೆ ಬರಲಿದ್ದು, ಅಲ್ಲಿಯ ತನಕ ಸಮರ್ಪಣೆ ಅಸಾಧ್ಯ. ರಥಕ್ಕೆ ಸಂಬಂಧಿಸಿ ಉಳಿದ ಕೆಲಸ ಕಾರ್ಯಗಳು ನಡೆದು ದೀಪಾವಳಿ ಸಂದರ್ಭ (ನವೆಂಬರ್) ರಥ ಸಮರ್ಪಣೆಯಾಗಲಿದೆ. ಡಿಸೆಂಬರ್‌ನಲ್ಲಿ ನಡೆಯುವ ಚಂಪಾ ಷಷ್ಠಿ ಸಂದರ್ಭ ನೂತನ ಬ್ರಹ್ಮರಥದಲ್ಲಿ ದೇವರು ಆರೋಹಣರಾಗುವರು.