Advertisement

Subrahmanya ನಿಂದನಾತ್ಮಕ ಬರಹ, ಗರ್ಭಗುಡಿಯ ಫೋಟೋ ತೆಗೆದ ಆರೋಪ: ದೂರು

11:19 PM Nov 18, 2023 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ ಹಾಗೂ ಗರ್ಭಗುಡಿಯ ಫೋಟೋ ತೆಗೆದ ಆರೋಪದಡಿ ಕುಲ್ಕುಂದದ ಶ್ರೀನಾಥ್‌ ಭಟ್‌ ಅವರ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಶ್ರೀನಾಥ್‌ ಭಟ್‌ ಅವರು, ಗರ್ಭಗುಡಿಯ ಫೋಟೋ ತೆಗೆಯುಲು ನಿಷೇಧವಿದ್ದರೂ ಫೋಟೋ ತೆಗೆದು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಅಲ್ಲದೆ ಅರ್ಚಕರು, ಪುರೋಹಿತರನ್ನು ಉದ್ದೇಶಿಸಿ ಅವಾಚ್ಯ ಶಬ್ದ ಹಾಗೂ ನಿಂದನಾತ್ಮಕವಾಗಿ ಬರೆದು ಅವರ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next