Advertisement
ಅವರನ್ನು ದೇವಸ್ಥಾನದ ವತಿಯಿಂದ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ ಸಹಿತ ಪಕ್ಷದ ಪ್ರಮುಖರು ಹೂಗುತ್ಛ ನೀಡಿ ಸ್ವಾಗತಿಸಿದರು.
ದೇವರಿಗೆ ಮಹಾಭಿಷೇಕ ಸೇವೆ ಸಲ್ಲಿಸಿ ಮಧ್ಯಾಹ್ನದ ಮಹಾಪೂಜೆ ನೆರವೇರಿಸಿದರು. ಪೂಜೆಯ ಬಳಿಕ ದೇವಸ್ಥಾನ ಪ್ರಧಾನ ಅರ್ಚಕ ರಮೇಶ್ ಆಸ್ರಣ್ಣ ಅವರು ಯಡಿಯೂರಪ್ಪ ಅವರಿಗೆ ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಹರಸಿದರು. ನರಸಿಂಹ ಸ್ವಾಮಿ ದರುಶನ ಮತ್ತು ಹೊಸಳಿಗಮ್ಮ ಗುಡಿಯ ಪೂಜೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
Related Articles
Advertisement
ಧರ್ಮಸ್ಥಳದಲ್ಲಿ ದೇವರ ದರ್ಶನಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೋಮವಾರ ಮುಂಜಾನೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಜತೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು. ಅವರನ್ನು ಡಾ| ಹೆಗ್ಗಡೆಯವರು ಗೌರವಿಸಿದರು. ಬಳಿಕ ಮಾಧ್ಯಮದ ಜತೆ ಮಾತನಾಡಿದ ಬಿಎಸ್‌ವೈ, 2019ರಲ್ಲಿ ಬೆಳ್ತಂಗಡಿಯಲ್ಲಿ ಪ್ರವಾಹಕ್ಕೆ ತುತ್ತಾದ ಸಂದರ್ಭದಲ್ಲಿ ಬೆಳ್ತಂಗಡಿ ಪ್ರವಾಸ ಬಂದಿದ್ದಾಗ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ. ಬಹಳ ವರ್ಷಗಳ ಬಳಿಕ ಮತ್ತೆ ಬಂದಿದ್ದೇನೆ. ನಮ್ಮೂರಲ್ಲಿ ಬರಗಾಲ, ಊರಲ್ಲಿ ಮಳೆಯಾಗಿ ಸಮೃದ್ಧಿಯಿಂದ ಬೆಳೆಯಾಗಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸಿದ್ದೇನೆ. ವೀರೇಂದ್ರ ಹೆಗ್ಗಡೆಯವರ ಜತೆಗೆ ದೇವರ ದರ್ಶನ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು. ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಕ್ಷೇತ್ರದ ಕಚೇರಿ ವ್ಯವಸ್ಥಾಪಕ ಪಾರ್ಶ್ವನಾಥ್ ಜೈನ್ ಮತ್ತಿತರರಿದ್ದರು.