ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ವಹಿಸಕೊಂಡ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದೇವೆ. ಇದೀಗ ಮಾಸ್ಟರ್ ಪ್ಲಾನ್ ಯೋಜನೆಯ ಎರಡನೇ ಹಂತದ ಕಾಮಗಾರಿಯಲ್ಲಿ 68.60 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ನಿರ್ಮಾಣಕ್ಕೆ ಚಾಲನೆ ದೊರಕಿದೆ. ನಗರದ ಎಲ್ಲ ರಸ್ತೆಗಳನ್ನು ಕಾಂಕ್ರೀಟ್‌ಗೊಳಿಸಿ ಸುಂದರವಾಗಿ ರೂಪಿಸುವ ಕಾರ್ಯ ಒಂದು ದಿಟ್ಟ ಹೆಜ್ಜೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಭಿಪ್ರಾಯಪಟ್ಟರು.
ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ನಗರದ ಮಾಸ್ಟರ್ ಪ್ಲಾನ್ ಎರಡನೇ ಹಂತದಲ್ಲಿ 68.60 ಕೋಟಿ ರೂ. ವೆಚ್ಚದಲ್ಲಿ ಕುಮಾರಧಾರಾ-ಕಾಶಿಕಟ್ಟೆ ನಡುವೆ ಚತುಷ್ಪಥ ನಿರ್ಮಾಣ ಕಾಮಗಾರಿಗೆ ಕುಮಾರಧಾರಾ ಬಳಿ ಮುಹೂರ್ತ ನೆರವೇರಿಸಿ ಅವರು ಮಾತನಾಡಿದರು.
ಅರ್ಚಕ ಗಣೇಶ್ ಭಟ್ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ದೇವಸ್ಥಾನದ ವ್ಯವ ಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಮಹೇಶಕುಮಾರ್ ಕರಿಕ್ಕಳ, ರಾಜೀವಿ ರೈ ಆರ್., ದಮಯಂತಿ ಕೂಜುಗೋಡು, ಮಾಧವ ಡಿ., ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಶಿವರಾಮ ರೈ, ಕೆ.ಪಿ. ಗಿರಿಧರ, ಲೋಲಾಕ್ಷ ಕೈಕಂಬ, ಸುಧೀರ್ ಕುಮಾರ್ ಶೆಟ್ಟಿ ಬಿಳಿನೆಲೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಹೊಸಮನೆ, ಗ್ರಾ.ಪಂ. ಸದಸ್ಯರಾದ ಮೋಹನದಾಸ್ ರೈ, ರಾಜೇಶ್ ಎನ್.ಎಸ್., ದಿನೇಶ್ ಬಿ.ಎನ್., ರವೀಂದ್ರನಾಥ ಶೆಟ್ಟಿ, ಗುತ್ತಿಗೆದಾರರಾದ ಮಂಜುಶ್ರೀ ಕನ್‌ಸ್ಟ್ರಕ್ಷನ್ಸ್‌ನ ದಯಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಪಿಡಬ್ಲುಡಿ ಎಂಜಿನಿಯರ್‌ಗಳಾದ ಸಣ್ಣೆ ಗೌಡ, ಶ್ರೀಕಾಂತ್, ಪ್ರಮುಖರಾದ ಸತೀಶ್ ಕೂಜುಗೋಡು, ಗಣೇಶ್ ಪ್ರಸಾದ್, ರವಿ ಕಕ್ಕೆಪದವು, ದೇಗುಲದ ಎಂಜಿನೀಯರ್ ಉದಯಕುಮಾರ್, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಷಣ್ಮುಖ ಉಪಾರ್ಣ, ಸಿಬಂದಿ ಉಪಸ್ಥಿತರಿದ್ದರು. ದೇಗುಲದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪೆರಾಲು ಅವರು ಸ್ವಾಗತಿಸಿ, ವಂದಿಸಿದರು.