Advertisement

ಕುಕ್ಕೆ ಆಂಜನೇಯ ದೇಗುಲದಲ್ಲಿ ಕಳವಿಗೆ ಯತ್ನ: ದೂರು ದಾಖಲು

11:27 AM Jun 02, 2019 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಟ್ಟಿರುವ ಸವಾರಿ ಮಂಟಪ ಹಿಂಬದಿಯ ಶ್ರೀ ಅಭಯ ಆಂಜನೇಯ ದೇವಸ್ಥಾನದಿಂದ ಶುಕ್ರವಾರ ತಡರಾತ್ರಿ ಕಳವಿಗೆ ಯತ್ನಿಸಲಾಗಿದೆ.

Advertisement

ಶನಿವಾರ ಬೆಳಗ್ಗೆ ದೇಗುಲದ ಸಿಬಂದಿ ಹಾಗೂ ಅರ್ಚಕರಿಗೆ ಕಳ್ಳರು ನುಗ್ಗಿರುವುದು ಗೊತ್ತಾಗಿದೆ. ದೇವಸ್ಥಾನದ ಸುತ್ತ ಮೇಲ್ಛಾವಣಿ ನಿರ್ಮಿಸಿ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದೆ. ಕಳ್ಳರು ಅದರ ಮೇಲಿನಿಂದ ಹೊರಾಂಗಣ ಪ್ರವೇಶಿಸಿ ಗರ್ಭಗುಡಿಯ ಬೀಗ ಒಡೆದು ಒಳ ನುಗ್ಗಿದ್ದಾರೆ.

ಗರ್ಭಗುಡಿಯ ಒಳಗಿದ್ದ ಕಾಣಿಕೆ ಹುಂಡಿಯ ಬೀಗ ಒಡೆದಿದ್ದರೂ ಅದ ರಲ್ಲಿದ್ದ ಹಣವನ್ನು ಕೊಂಡೊಯ್ಯದಿರು ವುದು ಆಶ್ಚರ್ಯ ಮೂಡಿಸಿದೆ. ಆಂಜನೇಯ ಮೂರ್ತಿಗೂ ಹಾನಿ ಮಾಡಿಲ್ಲ.

ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಸೇವಾ ಕೌಂಟರಿನ ಮೇಲಿನ ಶೀಟನ್ನು ಜಾರಿಸಿ ಒಳ ಗಿಳಿದು ಕೌಂಟರ್‌ನಲ್ಲಿದ್ದ ಚಿಲ್ಲರೆ ಹಣ ಎಗರಿಸಿದ್ದು ಬಿಟ್ಟರೆ ಹೆಚ್ಚಿನ ಕಳವು ಮಾಡಿಲ್ಲ. ಘಟನೆ ಸಂಬಂಧ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್‌. ಅವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಶ್ರಮಿ ಸುತ್ತಿದ್ದಾರೆ.

ಸಿ.ಸಿ. ಕೆಮರಾ ಇಲ್ಲ
ನಗರದ ಪ್ರಮುಖ ಭಾಗದಲ್ಲಿಯೇ ಆಂಜನೇಯ ಗುಡಿಯಿದ್ದು, ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಇಲ್ಲಿಗೂ ಬರುತ್ತಾರೆ. ಇಲ್ಲಿ ಸಿ.ಸಿ. ಕೆಮರಾಗಳಿಲ್ಲ ಹಾಗೂ ರಾತ್ರಿ ಭದ್ರತಾ ಸಿಬಂದಿಯೂ ಇಲ್ಲ. ಈ ಮಾಹಿತಿ ಇರುವವರೇ ಕಳವು ನಡೆಸಿರುವ ಶಂಕೆಯಿದೆ.

Advertisement

ಶುದ್ಧೀಕರಣ
ಕಿಡಿಗೇಡಿಗಳು ಗರ್ಭಗುಡಿ ಪ್ರವೇಶಿಸಿ ಅಶುದ್ಧವಾಗಿರುವ ಕಾರಣ ಶನಿವಾರದ ಪೂಜಾ ವಿಧಾನಗಳನ್ನು ತಾತ್ಕಾಲಿಕವಾಗಿ ಸ್ತಗಿತಗೊಳಿಸಲಾಗಿತ್ತು. ಶುದ್ಧಗೊಳಿಸಿದ ಬಳಿಕ ನಿತ್ಯ ಪೂಜೆಗಳನ್ನು ನಡೆಸಲು ಅರ್ಚಕರ ಸಲಹೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next