Advertisement
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಾಲ್ಕು ಜೋಡಿ ಮತ್ತು ಮೂಲ್ಕಿಯ ಬಪ್ಪನಾಡು ದೇಗುಲದಲ್ಲಿ ಎರಡು ಜೋಡಿ “ಸಪ್ತಪದಿ’ಯಡಿ ಗುರುವಾರ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಚುನಾವಣೆ ಘೋಷಣೆಯಾಗುವುದಕ್ಕೆ ಮುನ್ನವೇ ದಿನಾಂಕ ನಿಗದಿಪಡಿಸಿದ್ದರಿಂದ ನಿಗದಿತ ದಿನಾಂಕದಂದೇ ವಿವಾಹ ನಡೆಯುತ್ತಿದೆ. ಜೋಡಿಗಳ ಹೆತ್ತವರ ಸಹಿತ ಕೆಲವೇ ಮಂದಿ ಭಾಗವಹಿಸಲಿದ್ದು ಕಾರ್ಯಕ್ರಮ ಸರಳವಾಗಿಯೇ ನಡೆಯಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ವೆಂಕಟೇಶ್ ತಿಳಿಸಿದ್ದಾರೆ.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮಸಮ್ಮೇಳನ ಮಂಟಪ ದಲ್ಲಿ ಸರಳ ಸಾಮೂಹಿಕ ವಿವಾಹ ಬೆಳಗ್ಗೆ 11.30ಕ್ಕೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗಿದ್ದು ದೇಗುಲದ ಆಡಳಿತಾಧಿಕಾರಿಗಳು, ಅಭಿವೃದ್ಧಿ ಸಮಿತಿಯವರು, ಅಧಿಕಾರಿಗಳು ಉಪಸ್ಥಿತ ರಿರಲಿದ್ದಾರೆ.
Related Articles
Advertisement
ಬಪ್ಪನಾಡು: ಎರಡು ಮದುವೆಮೂಲ್ಕಿ: ಇಲ್ಲಿನ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣ ಸಭಾಗೃಹದಲ್ಲಿ ಎರಡು ಜೋಡಿಗಳ ವಿವಾಹ ಸರಕಾರದ ಆದೇಶದಂತೆ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ. ಉಡುಪಿ: ಮುಹೂರ್ತ ಕೂಡಿ ಬಂದಿಲ್ಲ !
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಪ್ತಪದಿ ಜನೆಯಂತೆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು 29 ಜೋಡಿಗಳು ಸಿದ್ಧ ಇವೆಯಾದರೂ ಮುಹೂರ್ತ ಕೂಡಿಬಂದಿಲ್ಲ. ಸರಕಾರ 40,000 ರೂ. ಮೊತ್ತವನ್ನು ಕರಿಮಣಿಗಾಗಿ ನಿಗದಿಪಡಿಸಿದ್ದು ಇದನ್ನು ಬೆಂಗಳೂರಿನ ಕರ್ನಾಟಕ ಕರಕುಶಲ ನಿಗಮ ದವರು ಮಾಡಿಕೊಡಬೇಕು. ಜಿಲ್ಲೆಯಿಂದ 29 ಕರಿಮಣಿ ಮಾಡಿ ಕಳುಹಿಸಲು ಸೂಚನೆ ನೀಡಲಾಗಿದೆ. ನಿಗಮದಿಂದ ಕರಿಮಣಿ ಬಂದ ಬಳಿಕ ಸೂಕ್ತ ದಿನವನ್ನು ನಿಗದಿಪಡಿಸಿ ಸಾಮೂಹಿಕ ವಿವಾಹವನ್ನು ನಡೆಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ. ಜಿಲ್ಲೆಯ ನಾಲ್ಕು ದೇಗುಲಗಳಲ್ಲಿ ವಿವಾಹ ಏರ್ಪಡಿಸಲು ಸಿದ್ಧತೆ ನಡೆದಿದೆ. ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗರಿಷ್ಠ 19, ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಆರು ಜೋಡಿ, ಕಾಪು ಹೊಸ ಮಾರಿಗುಡಿಯಲ್ಲಿ ಮೂರು ಮತ್ತು ಉಪ್ಪುಂದ ದುರ್ಗಾಪರಮೇಶ್ವರಿ ದೇಗುಲದಲ್ಲಿ ಒಂದು ಜೋಡಿ ಹಸೆಮಣೆಗೆ ಏರಲಿದೆ.