ಕುದುರೆಮುಖ: ಘಾಟಿಯಲ್ಲಿ ವಾಹನ ಸವಾರರ ಪರದಾಟ ಮುಂದುವರಿದಿದ್ದು ಬುಧವಾರ ಕುದುರೆಮುಖ ಘಾಟ್‌ನಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಾವಿರಾರು ವಾಹನ ಸವಾರರು ಪರದಾಡಬೇಕಾಗಿದೆ.
ಟ್ಯಾಂಕರೊಂದು ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ನೂರಾರು ಬಸ್‌ಗಳು ಸೇರಿದಂತೆ ಹಲವು ವಾಹನಗಳು ನಿಂತಲ್ಲೇ ನಿಂತಿವೆ.
ಸ್ಥಳಕ್ಕಾಗಮಿಸಿರುವ ಪೊಲೀಸರು ಟ್ಯಾಂಕರ್ ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
ಶೃಂಗೇರಿಯ ಎಸ್.ಕೆ .ಬಾರ್ಡರ್‌ನಿಂದ ಘಾಟಿಯ ವರೆಗೆ 10 ಕಿ.ಮೀ ಯಷ್ಟು ವಾಹನಗಳ ಸಾಲು ನಿಂತಲ್ಲೇ ನಿಂತಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಪ್ರಯಾಣಿಕರು ಮೂಡಿಗೆರೆ ಮಾರ್ಗವಾಗಿ ಕುದುರೆಮುಖ ಘಾಟಿಯಿಂದ ಕಾರ್ಕಳ, ಉಡುಪಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು.
ಶಿರಾಡಿ ಘಾಟಿ ಬಂದ್ ಆದ ಬಳಿಕ,ಚಾರ್ಮಾಡಿ ಘಾಟಿಯಲ್ಲಿ ಸಂಚಾರ ದಟ್ಟನೆ ಇರುವ ಹಿನ್ನಲೆಯಲ್ಲಿ ಹಲವರು ಕುದುರೆಮುಖ ಘಾಟ್‌ನಲ್ಲಿ ಪ್ರಯಾಣಿಸುತ್ತಿದ್ದರು.