Advertisement
ವರ್ಷಗಳೇ ಕಳೆದರೂ ಡಾಂಬರು ಕಾಣದ ರಸ್ತೆ, ದಾರಿಯುದ್ದಕ್ಕೂ ತಗ್ಗು, ದಿನ್ನೆಗಳದ್ದೇ ದರ್ಬಾರ್ ವಾಹನ ಸಂಚಾರ ಇರಲಿ, ಪಾದಚಾರಿಗಳು ಸಂಚಾರ ಮಾಡುವುದು ಕಷ್ಟ. ಹೌದು, ಮಾಗಡಿ ತಾಲೂಕಿನ ಕುದೂರು ಮುಖ್ಯ ರಸ್ತೆಯ ಪರಿಸ್ಥಿತಿ ಇದಾಗಿದೆ. ರಸ್ತೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಾರಣ, ಈ ರಸ್ತೆಯಲ್ಲಿ ಗುಂಡಿಗಳ ದರ್ಬಾರೇ ಹೆಚ್ಚಾಗಿದೆ. ರಸ್ತೆಗೆ ಹಾಕಿದ್ದ ಎಲ್ಲಾ ಕಲ್ಲುಗಳು ಕಿತ್ತು ಆಳುದ್ದದ ಗುಂಡಿಗಳು ಬಿದ್ದಿವೆ. ಇಲ್ಲಿ ಸಂಚಾರ ಮಾಡಬೇಕೆಂದರೆ ಪ್ರಾಣವನ್ನೇ ಕೈಯಲ್ಲಿಟ್ಟುಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆಗಾಲದಲ್ಲಿ ಓಡಾಡುವುದೇ ದುಸ್ಸಾಹಸವಾಗಿದೆ. ಹದಗೆಟ್ಟ ರಸ್ತೆಯಲ್ಲಿ ಆಳದ ಗುಂಡಿಗಳು ಬಿದ್ದು ಗಬ್ಬೆದ್ದು ಹೋಗಿದೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಜನಪ್ರತಿನಿಧಿಗಳು ತಲೆ ಕೆಡೆಸಿಕೊಂಡಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಹಳ್ಳಿಗಳ ಕಡೆ ತಲೆ ಹಾಕಿ, ಮಲಗುವ ರಾಜಕಾರಣಿಗಳಿಗೆ ಮಿಕ್ಕ ಸಂದರ್ಭದಲ್ಲಿ ಪ್ರಯಾಣಿಕರ ಹಾಗೂ ಗ್ರಾಮಸ್ಥರ ಗೋಳು ಕೇಳಿಸುವುದಿಲ್ಲವೇ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಎರಡು ದಿನಗಳ ಹಿಂದೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕುದೂರು ಮುಖ್ಯ ರಸ್ತೆ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಅವರು ಕಲಾವಕಾಶ ಕೇಳಿದ್ದಾರೆ. ಈ ವಾರದಲ್ಲಿ ಕಾಮಗಾರಿ ಪ್ರಾರಂಭ ಮಾಡದಿದ್ದರೆ, ಟೆಂಡರ್ ರದ್ದುಗೊಳಿಸಲಾಗುವುದು ಎಂದು ಸೂಚಿಸಿದ್ದೇವೆ. -ರಾಮಣ್ಣ, ಎಇಇ, ಲೋಕೋಪಯೋಗಿ ಇಲಾಖೆ
ವೃದ್ಧರು, ಗರ್ಭಿಣಿಯರು ಚಿಕಿತ್ಸೆಗಾಗಿ ಪಟ್ಟಣದ ಆಸ್ಪತ್ರೆ ತೆರಳಲು ವಾಹನ ಚಾಲ ಕರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕು ತ್ತಾರೆ. ಪ್ರಶ್ನಿಸದರೆ, ನಿಮ್ಮ ಊರಿನ ರಸ್ತೆ ಹದಗೆಟ್ಟಿದೆ ಎಂದು ದೂರುತ್ತಾರೆ. ಹದಗೆಟ್ಟ ರಸ್ತೆ ಸರಿಪಡಿಸು ವಂತೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ವರ್ಷಗಳಿಂದ ರಸ್ತೆ ಅವ್ಯವಸ್ಥೆಯಿಂದ ರೋಸಿ ಹೋಗಿದ್ದೇವೆ. ಆದರೂ, ಸಂಬಂಧಪಟ್ಟವರು ಗಮನ ಹರಿಸುತ್ತಿಲ. – ನಟರಾಜು, ಸ್ಥಳೀಯ ನಿವಾಸಿ
ಇನ್ನೊಂದು ವಾರದೊಳಗೆ ರಸೆ ಅಭಿವೃದ್ಧಿಪಡಿಸದೆ ಹೋದರೆ, ಗ್ರಾಮಸ್ಥರೆಲ್ಲಾ ಸೇರಿಕೊಂಡು ರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. -ವಿವೇಕ್, ಕುದೂರು ನಿವಾಸಿ
ರಸ್ತೆ ಅಭಿವೃದ್ಧಿ ಪಡಿಸುತ್ತೇವೆಂದು ಇದ್ದ ರಸ್ತೆಯನ್ನು ಹಾಳು ಮಾಡಿ, ವರ್ಷಗಳೇ ಕಳೆದರೂ ಇದಕ್ಕೆ ಮುಕ್ತಿ ದೊರಕಿಸಲಿಲ್ಲ. ರಸ್ತೆ ಕಿತ್ತು ಹಾಕಿರುವುದರಿಂದ ಧೂಳು ಕುಡಿದು ಕಾಯಿಲೆಗಳನ್ನು ಬರಸಿಕೊಳ್ಳಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ನೀಡುತ್ತಿರುವ ಬಹುಮಾನ. -ಬಿ.ಜಿ.ಕೃಷ್ಣಕುಮಾರ್, ಅಧ್ಯಕ್ಷ, ವರ್ತಕರ ಸಂಘ
– ಕೆ.ಎಸ್.ಮಂಜುನಾಥ್