ಮಂಗಳೂರು: ಜಿ.ಆರ್.ಕೆ ಲಾಂಛನದಲ್ಲಿ ತಯಾರಾದ ಎ.ವಿ. ಜಯರಾಜ್ ನಿರ್ದೇಶನದ ಗೌರಿ ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ “ಕುದ್ಕನ ಮದ್ಮೆ’ ತುಳು ಸಿನೆಮಾ ಕರಾವಳಿಯಾದ್ಯಂತ ಶುಕ್ರವಾರ ಏಕಕಾಲದಲ್ಲಿ ತೆರೆ ಕಂಡಿತು.
ಮಂಗಳೂರಿನ ಜ್ಯೋತಿ ಸಿನೆಮಾ ಮಂದಿರದಲ್ಲಿ ಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಚಲನಚಿತ್ರ ನಿರ್ಮಾಪಕ- ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ದೀಪ ಬೆಳಗಿಸಿ ಮಾತನಾಡಿ, 2020ರ ಸಾಲಿನಲ್ಲಿ ತೆರೆ ಕಾಣುವ ಮೊದಲ ತುಳು ಸಿನೆಮಾ ಕುದ್ಕನ ಮದ್ಮೆ ಯಶಸ್ಸನ್ನು ದಾಖಲಿಸಲಿ. ತುಳು ಚಿತ್ರರಂಗಕ್ಕೆ ಹೊಸ ಸ್ಫೂರ್ತಿ ಒದಗಿಸಲಿ ಎಂದು ಶುಭ ಹಾರೈಸಿದರು. ಉಭಯ ಜಿಲ್ಲೆಗಳ ವಿವಿಧ ಮಂದಿರಗಳಲ್ಲಿ ಚಿತ್ರ ಮೊದಲ ದಿನವೇ ಯಶಸ್ವಿ ಪ್ರದರ್ಶನ ಕಂಡಿತು.
ಕದ್ರಿ ನವನೀತ ಶೆಟ್ಟಿ ಮಾತನಾಡಿ, ಕುದ್ಕನ ಮದ್ಮೆ ಸಿನೆಮಾದಲ್ಲಿ ಘಟಾನುಘಟಿ ಕಲಾವಿದರಿದ್ದಾರೆ. ಹೀಗಾಗಿ ಹಾಸ್ಯಕ್ಕೆ ಏನೂ ಕೊರತೆ ಇರಲಾರದು. ಸಿನೆಮಾ ಯಶಸ್ವಿ ಪ್ರದರ್ಶನ ಕಾಣಲಿ ಎಂದರು.
ಚಲನಚಿತ್ರ ನಿರ್ಮಾಪಕರಾದ ಆರ್. ಧನರಾಜ್, ಶರತ್ ಕದ್ರಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಕಲಾವಿದರಾದ ಭೋಜರಾಜ ವಾಮಂಜೂರು, ಮಹೇಶ್ ಮೂರ್ತಿ ಸುರತ್ಕಲ್, ನಿರ್ಮಾಪಕರಾದ ಗೌರಿ ಆರ್. ಹೊಳ್ಳ, ಮಹಾಬಲೇಶ್ವರ ಹೊಳ್ಳ, ಸುಬ್ರಹ್ಮಣ್ಯ ಹೊಳ್ಳ, ನಿರ್ದೇಶಕ ಎ.ವಿ. ಜಯರಾಜ್, ಸುಹಾಸ್ ಹೊಳ್ಳ, ಶಶಿರಾಜ್ ಕಾವೂರು, ಆನಂದ ಶೆಟ್ಟಿ ಅಡ್ಯಾರ್, ಶೀತಲ್ ನಾಯಕ್, ಜೀವನ್ ಉಳ್ಳಾಲ್, ರಮೇಶ್ ರೈ ಕುಕ್ಕುವಳ್ಳಿ, ಕುಮಾರ್ ಬಂಗೇರ, ಗೌತಮ್ ವಿ. ಶೆಟ್ಟಿ, ಶ್ರೀಶ ಭಂಡಾರಿ, ಚಂದ್ರಾವತಿ ವಸಂತ್, ಸುಧನ್ ಶ್ರೀಧರ್, ಪೃಥ್ವಿ ಅಂಬರ್, ಉದಯ ಆಳ್ವ ಸುರತ್ಕಲ್, ಯಶವಂತ ಶೆಟ್ಟಿ ಕೃಷ್ಣಾಪುರ, ಅರುಣ್ ಶೆಟ್ಟಿ ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಕುದ್ಕನ ಮದ್ಮೆ; ಕಲಾವಿದರ ಸಂಗಮ
ಕುದ್ಕನ ಮದೆಮದ್ಮೆ ಸಿನೆಮಾದಲ್ಲಿ ಪೃಥ್ವಿ ಅಂಬರ್, ಶೀತಲ್ ನಾಯಕ್, ದೇವಿಪ್ರಕಾಶ್ ಉರ್ವ, ಕಾರ್ತಿಕ್ ರಾವ್ ಮತ್ತು ಮುಂಬಯಿ ರಂಗ ಕಲಾವಿದೆ ಚಂದ್ರಾವತಿ ವಸಂತ್ ಮುಖ್ಯ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ಪಿಂಕಿರಾಣಿ, ಜೀವನ್ ಉಳ್ಳಾಲ ತಾರಾಗಣದಲ್ಲಿದ್ದಾರೆ.