Advertisement

ಇಂದು  ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

04:30 AM Feb 17, 2019 | Team Udayavani |

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವಗಿರಿ ಮಠದ ಶ್ರೀ ಸುಗುದಾನಂದ ತಂತ್ರಿ ಮತ್ತು ಶ್ರೀ ಕ್ಷೇತ್ರದ ಮುಖ್ಯ ಅರ್ಚಕ ಲಕ್ಷ್ಮಣ ಶಾಂತಿಯವರ ಪೌರೋಹಿತ್ಯದಲ್ಲಿ ಫೆ. 17ರಂದು ನಡೆಯಲಿದೆ.

Advertisement

ಫೆ.10ರಿಂದ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭ ಗೊಂಡಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ಅಂಗವಾಗಿ ನೂತನ ಧ್ವಜಸ್ತಂಭ, ತಾಮ್ರದ ಮೇಲ್ಛಾವಣಿ, ಸ್ವರ್ಣ ಲೇಪಿತ ಶಿಖರ ನಿರ್ಮಿಸಲಾಗಿದೆ.

ಫೆ.17ರಂದು ಬೆಳಗ್ಗೆ 7.35ಕ್ಕೆ ರಾಜ ಗೋಪುರ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಅಧಿವಾಸ, ವೀರಕಾಂಡ ಪೀಠ ಪೂಜೆ
ನಡೆಯಲಿದೆ. ಬೆಳಗ್ಗೆ ಗಂಟೆ 8.05ಕ್ಕೆವಾಹನ ಪ್ರತಿಷ್ಠೆ, ಕಲಶಾಭಿಷೇಕ, ಧ್ವಜಾ ರೋಹಣ. ಮಧ್ಯಾಹ್ನ ಗಂಟೆ 12.15ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ವಿಶೇಷ ಪೂಜೆ, ನೈವೇದ್ಯ ಪೂಜೆ, ಪ್ರಸನ್ನಪೂಜೆ, ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಶನಿವಾರ ಬೆಳಗ್ಗೆ 5 ರಿಂದ ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಜಲದ್ರೋಣಿ ಪೂಜೆ, ಕುಂಭೇಶ ಕರ್ಕರಿ ಪೂಜೆ, ಮಹಾಪೂಜೆ, ಸಂಜೆ 6.00ರಿಂದ ದೀಪಾರಾಧನೆ, ಖಂಡಬ್ರಹ್ಮಕಲಶ ಪೂಜೆ, ಶಿರತತ್ವ ಕಲಶಪೂಜೆ, ಅಧಿವಾಸ ಪೂಜೆ, ಪಾಲಿಕ ಬಲಿ, ಶಯ್ಯಪೂಜೆ, ಧಾನ್ಯಾಧಿವಾಸ ಅಧಿವಾಸ ಪೂಜೆ, ಕುಂಡ ಶುದ್ಧಿ, ಮಹಾಪೂಜೆ ನಡೆಯಿತು.

ಶಿವಗಿರಿ ಮಠಾಧಿಪತಿಗೆ ಸ್ವಾಗತ
ಕುದ್ರೋಳಿ ಕ್ಷೇತ್ರಕ್ಕೆ ಕೇರಳ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಅವರು ಶನಿವಾರ ಸಂಜೆ ಆಗಮಿಸಿದ್ದು, ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿ ಕೊಳ್ಳಲಾಯಿತು. ಸ್ವಾಮೀಜಿ ಎರಡು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ತಂಗಲಿದ್ದು, ಭಕ್ತರ ಭೇಟಿ ಲಭ್ಯರಿರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next