Advertisement

ಸಿಎಎ, ಎನ್‌ಆರ್‌ಸಿ ವಿರುದ್ಧ “ಕುದ್ರೋಳಿ ಚಲೋ’ಬೃಹತ್‌ ಪ್ರತಿಭಟನೆ

11:09 AM Feb 27, 2020 | sudhir |

ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧದ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ನೌಶೀನ್‌ ಹಾಗೂ ಅಬ್ದುಲ್‌ ಜಲೀಲ್‌ ಅವರ ಹುಟ್ಟೂರಿನಲ್ಲಿ ಕುದ್ರೋಳಿಯ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಬೃಹತ್‌ ಪ್ರತಿಭಟನೆ “ಕುದ್ರೋಳಿ ಚಲೋ’ ಮಂಗಳವಾರ ಕುದ್ರೋಳಿಯ ಟಿಪ್ಪು ಸುಲ್ತಾನ್‌ ಗಾರ್ಡನ್‌ ಮೈದಾನದಲ್ಲಿ ನಡೆಯಿತು.

Advertisement

ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಎಂದು ಘೋಷಣೆ ಕೂಗಿದರು.

ಪ್ರಗತಿಪರ ಚಿಂತಕ ಬಿ.ಆರ್‌. ಭಾಸ್ಕರ್‌ ಪ್ರಸಾದ್‌ ಮಾತನಾಡಿ, ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆಸುತ್ತಿ ರುವ ಪ್ರತಿಭಟನೆಗಳು ಸಾಕು. ಮುಂದಿನ ದಿನಗಳಲ್ಲಿ ಸಿಎಎ ಬಗ್ಗೆ ಮನೆ ಮನೆಗೂ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು ಎಂದರು.

ಯುವ ಚಿಂತಕ ರಾ. ಚಿಂತನ್‌, ಪ್ರಗತಿಪರ ಚಿಂತಕ ಸುಧೀರ್‌ಕುಮಾರ್‌ ಮರೋಳಿ, ಶಾಸಕ ಯು.ಟಿ. ಖಾದರ್‌, ಹಿರಿಯ ಪತ್ರಕರ್ತ, ಸಾಹಿತಿ ಎ.ಕೆ. ಕುಕ್ಕಿಲ, ವುಮೆನ್ಸ್‌ ಇಂಡಿಯ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ಲಿàಮ, ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್‌ ಕುದ್ರೋಳಿ ಮಾತನಾಡಿ ದರು. ಮಾಜಿ ಮೇಯರ್‌ ಕೆ. ಅಶ್ರಫ್‌ ಅಧ್ಯಕ್ಷತೆ ವಹಿಸಿದ್ದರು.

ಧಾರ್ಮಿಕ ಮುಖಂಡರಾದ ಎಚ್‌.ಐ. ಸುಫಿಯಾನ್‌ ಸಖಾಫಿ ಕಾವಳಕಟ್ಟೆ, ಕೆ.ಎಂ. ಇಕ್ಬಾಲ್‌ ಬಾಳಿಲ, ಎಂ.ಜಿ. ಮುಹಮ್ಮದ್‌ ಮಂಗಳೂರು, ಎಸ್‌ಡಿಪಿಐ ಮುಖಂಡ ಇಲ್ಯಾಸ್‌ ತುಂಬೆ, ಮುಸ್ಲಿಂ ಐಕ್ಯತಾ ವೇದಿಕೆಯ ಕಾರ್ಯದರ್ಶಿ ಎಂ. ಅಬ್ದುಲ್‌ ಅಝೀಝ್ ಕುದ್ರೋಳಿ, ಉಪಾಧ್ಯಕ್ಷ ಫ‌ಝಲ್‌ ಮುಹಮ್ಮದ್‌ ನಡುಪಳ್ಳಿ, ನಾಸಿರುದ್ದೀನ್‌ ಹೈಕೊ, ಸಂಶುದ್ದೀನ್‌ ಎಚ್‌.ಟಿ., ಮನಪಾ ಕಾರ್ಪೊರೇಟರ್‌ಗಳಾದ ಅಬ್ದುಲ್‌ ರವೂಫ್, ಮುನೀಬ್‌ ಬೆಂಗರೆ, ಅಶ್ರಫ್ ಬಜಾಲ್‌ ಉಪಸ್ಥಿತರಿದ್ದರು.

Advertisement

ವೇದಿಕೆಯ ಉಪಾಧ್ಯಕ್ಷ ಬಿ. ಅಬೂಬಕರ್‌ ಸ್ವಾಗತಿಸಿದರು. ನೌಫ‌ಲ್‌ ವಿಟ್ಲ, ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next