Advertisement

ಯುವಪೀಳಿಗೆ ದೇಶಪ್ರೇಮ ಮೈಗೂಡಿಸಿಕೊಳ್ಳಲಿ

05:01 PM Jul 28, 2019 | Naveen |

ಕೂಡ್ಲಿಗಿ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಮಹಾನ್‌ ಯೋಧರ ಸ್ಮರಣೆ ಅಗತ್ಯವಾಗಿದೆ. ಇಂದಿನ ಯುವಪೀಳಿಗೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಿದೆ. ಭಾರತದ ದೇಶಭಕ್ತಿ ಅಮರವಾಗಿ ಪ್ರತಿಯೊಬ್ಬರ ಮನದಲ್ಲಿ ಉಳಿಯಬೇಕು ಎಂದು ಉಪನ್ಯಾಸಕ ಜಗದೀಶ್ಚಂದ್ರ ಬೋಸ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಅವರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಗಿಲ್ ಎನ್ನುವಂತ ಸ್ಥಳ ಎತ್ತರವಾದ ಪ್ರದೇಶದಿಂದ ಹಿಮಪಾತ ಹೆಮ್ಮರವಾಗಿ ಬೀಳುತ್ತಿದ್ದರೂ ಜೀವದ ಹಂಗನ್ನು ತೊರೆದು ದೇಶವನ್ನು ರಕ್ಷಿಸಿದ ಮಹಾನ್‌ ಯೋಧರ ವೀರತೆಯನ್ನು ಸ್ಮರಿಸಬೇಕಿದೆ ಎಂದರು. ಸೈನಿಕರು ದಿಟ್ಟತನದಿಂದ ಹೋರಾಡಿ ಪಾಕಿಸ್ತಾನ ಸೈನಿಕರನ್ನು ಸದೆ ಬಡೆಯುತ್ತಾ ಕಾರ್ಗಿಲ್ ಯುದ್ಧದಲ್ಲಿ ಜಯಗಳಿಸಿದ್ದು ಐತಿಹಾಸಿಕ ಘಟನೆಯಾಗಿದೆ ಎಂದರು. ಭಾರತೀಯ ಸೈನಿಕರು ಕೆಚ್ಚೆದೆಯ ವಿಧೀರರು ಎಂದು ತಿಳಿಸಿದರು.

ಕಾರ್ಯಕ್ರಮಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯರಾದ ಜೆ. ವೆಂಕಟೇಶ ಮಾತನಾಡಿದರು. ಉಪನ್ಯಾಸಕ ಗೌಡ್ರ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕರಾದ ಮಹಾಂತೇಶ, ರಾಜಭಕ್ಷಿ, ಕೆ.ನಾಗರಾಜ, ಪ್ರಕಾಶ ಇದ್ದರು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚೆ ವಿದ್ಯಾರ್ಥಿಗಳು ಜಾಥದ ಮೂಲಕ ಕಾಲೇಜ್‌ನಿಂದ ಅಂಬೇಡ್ಕರ್‌ ವೃತ್ತದವರೆಗೂ ದೇಶಭಕ್ತಿಯ ಘೋಷ ವಾಕ್ಯಗಳನ್ನು ಕೂಗುತ್ತ ಸಾಗಿದರು. ಸಕ್ರಪ್ಪ ರಡ್ಡೇರ್‌ ನಿರೂಪಿಸಿದರು. ಸುಮಾ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next