Advertisement

ಕೆಲವೇ ದಿನಗಳಲ್ಲಿ “ಕುದ್ಕನ ಮದ್ಮೆ’

10:56 PM Dec 18, 2019 | mahesh |

ತುಳುನಾಡಿನಲ್ಲಿ ಅನಾದಿಕಾಲದಿಂದಲೂ ಬಹಳ ಹೆಸರುವಾಸಿಯಾದ ಮನೆತನ “ಅರ್ಕಾಡಿ ಬರ್ಕೆ’. ಹಿರಿಯರ ಬಳುವಳಿಯಾಗಿ ಅಪಾರ ಆಸ್ತಿ-ಪಾಸ್ತಿ ಹೊಂದಿರುವ ಈ ಮನೆತನದ ಈಗಿನ ಸದಸ್ಯರಲ್ಲಿ ಪರಸ್ಪರ ವೈ ಮನಸ್ಸು. ಆದರೆ ಹಿರಿಯರ ವಿಲ್‌ ಪ್ರಕಾರ ಇವರೆಲ್ಲವೂ ಒಂದಾಗದೇ ಇದ್ದರೆ ಈ ಆಸ್ತಿ-ಪಾಸ್ತಿಗಳು ಇವರಿಗೆ ದಕ್ಕುವುದಿಲ್ಲ. ಈ ಆಸ್ತಿಯ ಆಸೆಗಾಗಿ ಇವರ ಮಧ್ಯೆ ಬಂದು ಸೇರುವ ಕೆಲವು ನಕಲಿ ಸಂಬಂಧಿಕರು ಬ್ರೋಕರುಗಳು-ಸಮಯ ಸಾಧಕರು. ಇವರೆಲ್ಲ ಸೇರಿ ಸೃಷ್ಟಿಸುವ ಅವಾಂತರಗಳೇ “ಕುದ್ಕನ ಮದ್ಮೆ’.

Advertisement

ಜಿಆರ್‌ಕೆ ನಿರ್ಮಾಣದ ಬಿಡುಗಡೆಯ ನಿರೀಕ್ಷೆಯಲ್ಲಿರುವ “ಕುದ್ಕನ ಮದ್ಮೆ’ ಸಿನೆಮಾದ ನಿರ್ದೇಶಕ ಎ.ವಿ ಜಯರಾಜ್‌. ಪೃಥ್ವಿ ಅಂಬರ್‌ ಹಾಗೂ ನಾಯಕಿಯಾಗಿ ಶೀತಲ್‌ ನಾಯಕ್‌ ಅಭಿನಯಿಸಿದ್ದಾರೆ. ದೇವಿ ಪ್ರಕಾಶ್‌ ಉರ್ವ, ಶ್ರೀಷಾ ಭಂಡಾರಿ, ಕಾರ್ತಿಕ್‌ ರಾವ್‌ ಮತ್ತು ಮುಂಬೈ ರಂಗ ಕಲಾವಿದೆ ಚಂದ್ರಾವತಿ ವಸಂತ್‌ ಮುಖ್ಯ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್‌, ನವೀನ್‌ ಡಿ ಪಡೀಲ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್‌ ಉಳ್ಳಾಲ್‌, ಸೂರಜ್‌ ಸಾಲ್ಯಾನ್‌, ಮೋಹನ್‌ ಕೊಪ್ಪಳ, ಚೇತನ್‌ ಕದ್ರಿ, ಸುಮತಿ ಹಂದೆ, ಉದಯ್‌ ಆಳ್ವ ಸುರತ್ಕಲ್‌, ಯಶವಂತ್‌ ಶೆಟ್ಟಿ ಕೃಷ್ಣಾಪುರ, ಸುನಿಲ್‌ ಪಡುಬಿದ್ರೆ, ಕೃಷ್ಣ ಸುರತ್ಕಲ್‌, ರವೀಶ್‌ ಜೋಗಿ, ಯೋಗೀಶ್‌, ಅರುಣ್‌ ಶೆಟ್ಟಿ, ಸುಮಿತ್ರಾ ರೈ, ಕಿಶೋರ್‌ ಡಿ ಶೆಟ್ಟಿ ತಾರಾಗಣದಲ್ಲಿದ್ದಾರೆ.

ಚಿತ್ರದ ಕತೆ-ಚಿತ್ರಕಥೆ: ಸುಧನ್‌ ಶ್ರೀಧರ್‌, ಛಾಯಾಗ್ರಹಣ: ಮಹಾಬಲೇಶ್ವರ ಹೊಳ್ಳ, ಸಂಕಲನ: ಸುಬ್ರಹ್ಮಣ್ಯ ಹೊಳ್ಳ, ಸಂಗೀತ: ರಾಹುಲ್‌ ಆಚಾರ್ಯ ಕುಂಬ್ಳೆ, ನೃತ್ಯ: ಅಕುಲ್‌ ಮಾಸ್ಟರ್‌, ಸಾಹಸ ಕೌರವ ವೆಂಕಟೇಶ್‌, ನಿರ್ದೇಶಕರು: ರಾಕೇಶ್‌, ನವೀನ್‌ ಶೆಟ್ಟಿ, ಅನಿರುದ್ಧ್ ಉಳ್ಳಾಲ್‌, ಕರುಣ್‌ ಶೆಟ್ಟಿ, ರೋಶನಿ, ಕಾವ್ಯ ಶರತ್‌, ಸಾಹಿತ್ಯ ಸಂಭಾಷಣೆ, ಸಹ ನಿರ್ದೇಶನ : ಜೀವನ್‌ ಉಳ್ಳಾಲ್‌, ನಿರ್ದೇಶನ ಎ.ವಿ ಜಯರಾಜ್‌, ನಿರ್ಮಾಪಕರು ಗೌರಿ ಆರ್‌. ಹೊಳ್ಳ ಮತ್ತು ಸುಹಾಸ್‌ ಹೊಳ್ಳ.

Advertisement

Udayavani is now on Telegram. Click here to join our channel and stay updated with the latest news.

Next