ಜಿಆರ್‌ಕೆ ನಿರ್ಮಾಣದ ಎ.ವಿ. ಜಯರಾಜ್ ನಿರ್ದೇಶನದ ಗೌರಿ ಆರ್. ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ “ಕುದ್ಕನ ಮದ್ಮೆ’ ಸಿನೆಮಾ ಜ. 31ರಿಂದ ತುಳುನಾಡಿನಾದ್ಯಂತ ತೆರೆ ಕಾಣಲಿದೆ.
ಮಂಗಳೂರಿನ ಬಿಗ್ ಸಿನೆಮಾ, ಉಡುಪಿ, ಸುರತ್ಕಲ್‌ನ ನಟರಾಜ್, ಕಾರ್ಕಳದಲ್ಲಿ, ಮೂಡುಬಿದಿರೆಯ ಅಮರಶ್ರೀ, ಬೆಳ್ತಂಗಡಿಯ ಭಾರತ್, ಸುಳ್ಯದ ಸಂತೋಷ್, ಕಾಸರಗೋಡಿನ ಮೆಹಬೂಬ್ ಟಾಕೀಸ್‌ಗಳಲ್ಲಿ ಸಿನೆಮಾ ಬಿಡುಗಡೆಗೊಳ್ಳಲಿದೆ.
ಅರ್ಕಾಡಿ ಬರ್ಕೆ ಎಂಬ ತುಳುನಾಡಿನ ಖ್ಯಾತ ಮತ್ತು ಪ್ರತಿಷ್ಠಿತ ಮನೆತನದ ಕಥಾನಕವಾಗಿದೆ. ಈ ಮನೆತನಕ್ಕೆ ಹಿರಿಯರಿಂದಲೇ ಸಿಕ್ಕಿರುವ ಅಪಾರ ಆಸ್ತಿ ಇದ್ದು, ಪ್ರಸ್ತುತ ಆ ಕುಟುಂಬದವರಲ್ಲಿ ವೈಮನಸ್ಸು ಮೂಡಿತ್ತು. ಆದರೆ ಹಿರಿಯರ ವೀಲುನಾಮೆ ಪ್ರಕಾರ ಆಸ್ತಿ ಇವರಿಗೆ ದಕ್ಕಬೇಕಾದರೆ ಎಲ್ಲರೂ ವೈಮನಸ್ಸು ಬಿಟ್ಟು ಒಟ್ಟಾಗಬೇಕು. ಆದ್ದರಿಂದ ಈ ಆಸ್ತಿಗಾಗಿ ಸೃಷ್ಟಿಯಾಗುವ ನಕಲಿ ಸಂಬಂಧಿಕರು ಮತ್ತು ಬ್ರೋಕರ್‌ಗಳ ಸುತ್ತ ಈ ಸಿನೆಮಾದ ಕಥೆ ಸಾಗುತ್ತದೆ.
ನಾಯಕನಾಗಿ ಪೃಥ್ವಿ ಅಂಬರ್ ಹಾಗೂ ನಾಯಕಿಯಾಗಿ ಶೀತಲ್ ನಾಯಕ್, ದೇವಿ ಪ್ರಕಾಶ್ ಉರ್ವ, ಶ್ರೀಷಾ ಭಂಡಾರಿ, ಕಾರ್ತಿಕ್ ರಾವ್ ಮತ್ತು ಮುಂಬೈ ರಂಗ ಕಲಾವಿದೆ ಚಂದ್ರಾವತಿ ವಸಂತ್ ಮುಖ್ಯ ಪಾತ್ರದಲ್ಲಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್ ಉಳ್ಳಾಲ್, ಸೂರಜ್ ಸಾಲ್ಯಾನ್, ಮೋಹನ್ ಕೊಪ್ಪಳ, ಚೇತನ್ ಕದ್ರಿ, ಸುಮತಿ ಹಂದೆ, ಉದಯ್ ಆಳ್ವ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಸುನಿಲ್ ಪಡುಬಿದ್ರಿ, ಕೃಷ್ಣ ಸುರತ್ಕಲ್, ರವೀಶ್ ಜೋಗಿ, ಯೋಗೀಶ್, ಅರುಣ್ ಶೆಟ್ಟಿ, ಸುಮಿತ್ರಾ ರೈ, ಕಿಶೋರ್ ಡಿ. ಶೆಟ್ಟಿ ತಾರಾಗಣದಲ್ಲಿದ್ದಾರೆ.
ದಿನೇಶ್ ಇರಾ