ಎರಡೂ ನೃತ್ಯ ಪ್ರಕಾರಗಳು ವೇದಿಕೆಯ ಮೇಲೆ ಬಂದು ಜುಗಲ್‌ಬಂದಿ ನರ್ತನ ಸೊಗಸಾಗಿ ಮೂಡಿಬಂದಿತು. ಆನಂದ ಭೈರವಿ ರಾಗದ ಸ್ವರಕ್ಕೆ ಕೂಚುಪುಡಿ ಯಕ್ಷಗಾನ, ನರ್ತನ ಯಕ್ಷಗಾನದ ದಸ್ತುಗಳಿಗೆ ಕೂಚುಪುಡಿ ನರ್ತನ, “ಚಂದ ಬಾಮ… ಚಂದ ಬಾಮ…’
ನೃತ್ಯಕ್ಕೆ ಮೂಲಾಧಾರವಾದ ನಾಟ್ಯಶಾಸ್ತ್ರ ಗ್ರಂಥದ ಕೃರ್ತ ಭರತಮುನಿಯ ಸ್ಮರಣೆಗೋಸ್ಕರ 17 ವರ್ಷಗಳಿಂದ ಭರತಮುನಿ ಜಯಂತ್ಯುತ್ಸವವನ್ನು ಆಚರಿಸುತ್ತಾ ಬರುತ್ತಿರುವ ಸಂಸ್ಥೆ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನ . 17ನೇ ಭರತಮುನಿ ಜಯಂತ್ಯುತ್ಸವದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ರಾಧಾಕೃಷ್ಣ ತಂತ್ರಿಗಳ ಪುತ್ರಿ ವಿ| ವೀಣಾ ಮುರುಳೀಧರ ಸಾಮಗರ ನಿರ್ದೇಶನದಲ್ಲಿ ವಿಶೇಷವಾಗಿ ಸಂಯೋಜಿಸಲ್ಪಟ್ಟ ನೃತ್ಯವೇ ಕೂಚುಪುಡಿ- ಯಕ್ಷಗಾನ ಜುಗಲ್‌ಬಂದಿ. ಇದು ಎಲ್ಲೂ ಕಂಡರಿಯದ ವಿಶಿಷ್ಟವಾದ ಚಿಂತನೆ ಜುಗಲ್‌ಬಂದಿಯಲ್ಲಿ ಪ್ರಥಮವಾಗಿ ಯಕ್ಷಗಾನದಲ್ಲಿ ಪ್ರಾರ್ಥನೆ ಪಾಂಡವರ ಒಡ್ಡೋಲಗ, ಬಣ್ಣದ ವೇಷ, ಸ್ತ್ರೀ ವೇಷ, ಹಾಸ್ಯಗಾರ, ಮುಂಡಾಸು ವೇಷ, ಸಾಲ್ವ ಅಂಬೆಯರ ಶೃಂಗಾರವನ್ನು ಪ್ರದರ್ಶಿಸಿ, ಅನಂತರ ಕೂಚುಪುಡಿ ನೃತ್ಯದಲ್ಲಿ ಕೂಚುಪುಡಿ ತ್ರಿಪುರ ಸುಂದರ ದೇವಿಯ ಅಂಬಾಪರಾಕು, ಪ್ರಾರ್ಥನೆ, ಪೂರ್ವರಂಗವಿಧಿ, ಆಂಗಿಕಂ ಭುವನಮ್ ಶ್ಲೋಕ, ರಾಗದಲ್ಲಿ ಹೇಳುವ ಜತಿ, ಅರ್ಧನಾರೀಶ್ವರ ನೃತ್ಯ, ತರಂಗ, ಭಾಮಾಕಲಾಪ ನೃತ್ಯಗಳ ಪ್ರದರ್ಶನದ ನಂತರ ಎರಡೂ ನೃತ್ಯ ಪ್ರಕಾರಗಳು ವೇದಿಕೆಯ ಮೇಲೆ ಬಂದು ಜುಗಲ್‌ಬಂದಿ ನರ್ತನ ಸೊಗಸಾಗಿ ಮೂಡಿಬಂದಿತು. ಆನಂದ ಭೈರವಿ ರಾಗದ ಸ್ವರಕ್ಕೆ ಕೂಚುಪುಡಿ ಯಕ್ಷಗಾನ, ನರ್ತನ ಯಕ್ಷಗಾನದ ದಸ್ತುಗಳಿಗೆ ಕೂಚುಪುಡಿ ನರ್ತನ, “ಚಂದ ಬಾಮ… ಚಂದ ಬಾಮ…’ಯಕ್ಷಗಾನ ಸಾಹಿತ್ಯಕೆೆR ಎರಡರ ಅಭಿನಯ ಕೌಶಲ್ಯ ಹಾಗೂ ಕೊನೆಯಲ್ಲಿ ಕೂಚುಪುಡಿ ನೃತ್ಯದ ತೀರ್ಮಾನ, ಮೊಹರಗಳಿಗೆ ಯಕ್ಷಗಾನ ಕೂಚುಪುಡಿಯ ಜುಗಲ್‌ಬಂದಿಯ ಮುಕ್ತಾಯ.
ಯಕ್ಷಗಾನ ಹಾಗೂ ಕೂಚುಪುಡಿಯ ವೇಷಭೂಷಣ ಕಣ್ಮನ ಸೆಳೆದವು. ಯಕ್ಷಗಾನದ ಸಂಪೂರ್ಣ ನರ್ತನವನ್ನು ವೀಣಾ ಎಂ. ಸಾಮಗರ ಶಿಷ್ಯರಾದ ನೀಲಾವರ ವಿಶ್ವರೂಪ ಮಧ್ಯಸ್ಥರು ನಿರ್ದೇಶಿಸಿದರು. ಕೂಚುಪುಡಿ ನೃತ್ಯದ ನಿರ್ದೇಶನವನ್ನು ವೀಣಾ ಎಂ. ಸಾಮಗ ನೀಡಿದರು.ಕಾರ್ಯಕ್ರಮದಲ್ಲಿ ಯಕ್ಷಗಾನ ಹಾಗೂ ನೃತ್ಯದ ಹಿಮ್ಮೇಳ ಮೇಳೈಸಿದವು. ಯಕ್ಷಗಾನದ ಹಿಮ್ಮೇಳನ ಭಾಗವತಿಕೆಯಲ್ಲಿ ಸುರೇಶ್ ಆಚಾರ್ಯ ಮರ್ಣೆ, ಮದ್ದಳೆಯಲ್ಲಿ ದೇವದಾಸ್ ರಾವ್ ಕೂಡ್ಲಿ, ಚೆಂಡೆಯಲ್ಲಿ ಕೃಷ್ಣಾನಂದ ಶೈಣೈ ಶಿರಿಯಾರ ಭಾಗವಹಿಸಿದರು.ಕೂಚುಪುಡಿ ನೃತ್ಯದ ಹಿಮ್ಮೇಳನದಲ್ಲಿ ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ವೀಣಾ ಎಂ. ಸಾಮಗ, ಮೃದಂಗದಲ್ಲಿ ವಿ| ಮನೋಹರ್ ರಾವ್ ಮಂಗಳೂರು ಹಾಗೂ ಪಿಟೀಲಿನಲ್ಲಿ ವಿ| ಶ್ರೀಧರ್ ಆಚಾರ್ಯರು ಸಹಕರಿಸಿದರು.
ಯಕ್ಷಗಾನದ ಬಾಲಗೋಪಾಲದ ಪ್ರಾರ್ಥನೆಯಲ್ಲಿ ಬಾಲ ಕಲಾವಿದೆಯರಾದ ಪರ್ವಧಿ, ಶ್ರಾವ್ಯಾ ಒಡ್ಡೊಲಗದಲ್ಲಿ ಪವನ್ ರಾಜ್ ಸಾಮಗ, ರಚನ್, ಶ್ರವಣ್, ಕೇದಾರ್, ಅನಿರುದ್ಧ, ಬಣ್ಣದ ವೇಷದಲ್ಲಿ ಪೃಥ್ವಿರಾಜ್ ಸಾಮಗ, ಸ್ತ್ರೀ ವೇಷದಲ್ಲಿ ವಿಶ್ವರೂಪ ಮಧ್ಯಸ್ತ, ಮುಂಡಾಸು ವೇಷದಲ್ಲಿ ಸಂಪತ್, ಹಾಸ್ಯಗಾರರಾಗಿ ಸಾತ್ವಿಕ್ ಮತ್ತು ಶೈಲೇಶ್ ನರ್ತಿಸಿದರು.
ಕೂಚುಪುಡಿ ನೃತ್ಯದಲ್ಲಿ ಸಂಸ್ಥೆಯ ವಿದ್ಯಾರ್ಥಿನಿಯರಾದ ವಿ|ಗಾಯತ್ರಿ ಅಭಿಷೇಕ್, ವಿ|ದಿಶಾ, ವಿ|ಶ್ರೀ ಕಲ್ಯಾಣಿ ಜೆ. ಪೂಜಾರಿ, ವಿ| ಶ್ವೇತಾಶ್ರೀ ಭಟ್, ವಿ|ರಶ್ಮಿ ಗುರುಮೂರ್ತಿ, ವಿ| ಮಂಗಳಾ ಕಿಶೋರ್, ಮಯೂರಿ ಶಶಿರಾಜ್, ಕುಮಾರಿ ರಾಧಿಕಾ, ಕುಮಾರಿ ಪ್ರತೀಕ್ಷಾ ನರ್ತಿಸಿದ್ದರು.
ರಮ್ಯಾ