Advertisement

ಕುಚ್ಚಾರು: ಶಾಂತಿನಿಕೇತನ ಕಲಾ ಸಮ್ಮಿಲನ, ಸಮ್ಮಾನ

02:25 AM Dec 20, 2018 | Karthik A |

ಹೆಬ್ರಿ: ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚಾರು ಇದರ ಕಲಾ ಸಮ್ಮಿಲನ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ  ಡಿ.17ರಂದು ಕುಚ್ಚಾರು ಹೆರ್ಗ ವಿಟ್ಠಲ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂ.ಸದಸ್ಯೆ ಜ್ಯೋತಿ ಹರೀಶ್‌ ಉದ್ಘಾಟಿಸಿ ಮಾತನಾಡಿ, ಶಾಂತಿ ನಿಕೇತನ ಯುವವೃಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಉದಯ್‌ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ  ಮಾತನಾಡಿ, ಯುವ ಜನತೆಯೊಂದಿಗ ಸೇರಿಕೊಂಡು ಗ್ರಾಮೀಣ ಭಾಗವಾದ ಕುಚ್ಚಾರಿನಲ್ಲಿ ಸದ್ದಿಲ್ಲದೆ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದು ನಿಮ್ಮೊಂದಿಗೆ ಸದಾ ನಮ್ಮ ಟ್ರಸ್ಟ್‌ ಇದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕುಚ್ಚಾರು ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಪೂಜಾರಿ ವಹಿಸಿದ್ದರು. 

Advertisement

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ| ಗಣಪತಿ ಎಚ್‌.ಎ, ಉದ್ಯಾವರ ಬೋಳಾರ್‌ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ದಿನೇಶ್‌ ಪಿ, ತೆಕ್ಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಕೇಶವ್‌, ಕುಚ್ಚಾರು ಹೆರ್ಗ ವಿಟ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ಎಸ್‌.ಸುಬ್ರಹ್ಮಣ್ಯ ಭಟ್‌, ದೈಹಿಕ ಶಿಕ್ಷಕ ನಿತ್ಯಾನಂದ ಶೆಟ್ಟಿ, ಕುಚ್ಚಾರು -11 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಶಶಿಧರ ಶೆಟ್ಟಿ, ನಿವೃತ್ತ ಸೈನಿಕ ಟಿ.ಎನ್‌.ಕೃಷ್ಣಮೂರ್ತಿ, ಶಂಕರ್‌ ಶೆಟ್ಟಿ ,ಪ್ರಕಾಶ್‌ ಬಾಯರ್‌ ಹಾಗೂ  ಕುಚ್ಚಾರು ಕುಡಿಬೈಲು ಶಾಂತಿನಿಕೇತನ ಯುವವೃಂದದ ಗೌರವಾಧ್ಯಕ್ಷ  ಕಲಾವತಿ ಆರ್‌. ಮೊದಲಾದವರನ್ನು ಸಮ್ಮಾನಿಸಲಾಯಿತು. ಶಾಂತಿನಿಕೇತನ ವಿದ್ಯಾಸಾಧಕ ಪ್ರಶಸ್ತಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸಮ್ಮಾನ, ವಿವಿಧ ಶಾಲೆಗಳಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಹಾಗೂ ಸದಸ್ಯ ಅರುಣ್‌ ಕುಮಾರ್‌ ರಚಿಸಿರುವ ಇಂಡಿಯನ್‌ ಫೈನಾನ್ಸಿಯಲ್‌ ಸಿಸ್ಟಮ್‌ ಪುಸ್ತಕ ಬಿಡುಗಡೆಗೊಂಡಿತು. ತಾ. ಪಂ.ಸದಸ್ಯ ಅಮೃತ್‌ ಕುಮಾರ್‌ ಶೆಟ್ಟಿ ,ಉದ್ಯಮಿ ದಿನೇಶ್‌ ಪೈ,ಯುವ ವೃಂದದ ಅಧ್ಯಕ್ಷ ನಾಗರಾಜ್‌, ಉಪಾಧ್ಯಕ್ಷ ರವೀಶ್‌ ಶೆಟ್ಟಿ , ಸುಧೀರ್‌ ನಾಯಕ್‌,ಸಂದೀಪ್‌ ಮೊದಲಾದವರು ಉಪಸಿತ್ಥರಿದ್ದರು. ಕಾರ್ಯದರ್ಶಿ ರಾಜಶ್ರೀ ವರದಿ ವಾಚಿಸಿದರು. ಪ್ರ.ಕಾರ್ಯದರ್ಶಿ ರಾಜೇಶ್‌ ಬಹುಮಾನಿತರ ಪಟ್ಟಿ ವಾಚಿಸಿದರು. ಯುವವೃಂದದ ಅಧ್ಯಕ್ಷ ನಾಗರಾಜ್‌ ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ನಿರೂಪಿಸಿ, ರಶ್ಮಿ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next