Advertisement

ಕುಬೇರರ ನಾಚಿಸಿದ “ರಾಜ’ಕಾರಣಿಗಳು!

03:50 AM Mar 01, 2017 | |

ಹೊಸದಿಲ್ಲಿ: ನಿಮಗೆ 5 ವರ್ಷ ಕಾಲಾವಕಾಶ ನೀಡಿ, ಅಷ್ಟರಲ್ಲಿ ನಿಮ್ಮ ಆದಾಯವನ್ನು ಶೇ.100ರಷ್ಟು ಹೆಚ್ಚಿಸಿಕೊಳ್ಳಿ ಎಂಬ ಸವಾಲು ಹಾಕಿದರೆ? ಖಂಡಿತಾ ಆಗಲ್ಲ ಎಂದು ನೀವು ಕೈಚೆಲ್ಲಬಹುದು. ಆದರೆ, ಇದು ಅಸಾಧ್ಯವೇನೂ ಅಲ್ಲ ಎಂಬುದನ್ನು ನಮ್ಮ ರಾಜಕಾರಣಿಗಳು ತೋರಿಸಿಕೊಟ್ಟಿದ್ದಾರೆ!

Advertisement

ವಾಲ್‌ಸ್ಟ್ರೀಟ್‌, ಷೇರು ಮಾರುಕಟ್ಟೆ ಹೂಡಿಕೆದಾರರೂ ನಾಚುವಂತೆ ನಮ್ಮ ಜನಪ್ರತಿನಿಧಿಗಳು, ನೂರಲ್ಲ, ಇನ್ನೂರೂ ಅಲ್ಲ. ಬರೋಬ್ಬರಿ 44,235 ಶೇಕಡಾದಷ್ಟು ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. 5 ವರ್ಷಗಳ ಹಿಂದೆ ಕೆಲವು ಜನಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖೀದ ಆಸ್ತಿಯ ಪ್ರಮಾಣ ಶೇ.44,235 ರಷ್ಟು ಹೆಚ್ಚಳವಾಗಿರುವುದು ಬೆಳಕಿಗೆ ಬಂದಿದೆ.

ಕೇರಳದ ಚೆಂಗನ್ನೂರ್‌ ಕಾಂಗ್ರೆಸ್‌ ಶಾಸಕ ವಿಷ್ಣುನಾಥ್‌ ಅವರ ಆಸ್ತಿ 2008ರಲ್ಲಿ ಕೇವಲ 5,632 ರೂ. ಇತ್ತು. ಆದರೆ, 2013ರಲ್ಲಿ ಅದು 25 ಲಕ್ಷವಾಗಿದೆ. ಅಂದರೆ ಅವರ ಆಸ್ತಿಯಲ್ಲಿ ಶೇ.44,325ರಷ್ಟು ಹೆಚ್ಚಳವಾಗಿದೆ. ಲೋಕಸಭೆ ವಿಚಾರಕ್ಕೆ ಬಂದರೆ, 2009-14ರ ಅವಧಿಯಲ್ಲಿ ನಾಲ್ವರು ಸಂಸದರ ಆಸ್ತಿ ಶೇ.1200ರಷ್ಟು ಏರಿಕೆಯಾದರೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ, ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಸೇರಿದಂತೆ ಇತರೆ 22 ಮಂದಿ ಸಂಸದರ ಆಸ್ತಿ ಶೇ.500ರಷ್ಟು ಹೆಚ್ಚಾಗಿದೆ. ಬಿಜೆಪಿಯ ಕಮಲೇಶ್‌ ಪಾಸ್ವಾನ್‌ರ ಆಸ್ತಿ ಶೇ.5,649, ಐಯುಎಂಎಲ್‌ ಸಂಸದ ಮೊಹಮ್ಮದ್‌ ಬಶೀರ್‌ ಆಸ್ತಿ ಶೇ.2,081ರಷ್ಟು ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next