Advertisement

ಕೆಟಿಎಂ ಆರೆಂಜ್‌ ಡೇ: ರೇಸಿಂಗ್‌ ಬೈಕ್‌ಗಳ ರೋಚಕ ಸಾಹಸ

10:14 AM Sep 10, 2017 | |

ಕಲಬುರಗಿ: ರೇಸಿಂಗ್‌ ಬೈಕ್‌ಗಳ ಬ್ರಾಂಡ್‌ ಕೆಟಿಎಂ ಶನಿವಾರ ಸಂಜೆ ಕೆಟಿಎಂ ಬೈಕ್‌ ಮಾಲೀಕರಿಗಾಗಿಯೇ ರೋಮಾಂಚಕ ರೇಸಿಂಗ್‌ ಕಾರ್ಯಕ್ರಮ ಆಯೋಜಿಸಿತ್ತು.ಶಹಾಬಾದ ರಸ್ತೆಯಲ್ಲಿರುವ ಕಾರ್ನಿವಲ್‌ ಗೇಮ್ಸ್‌ ಆವರಣದಲ್ಲಿ ಈ ರಂಗೇರಿದ ಕಾರ್ಯಕ್ರಮ ನಡೆಯಿತು. ಉತ್ಸಾಹಿ ಚಾಲಕರು ರೇಸಿಂಗ್‌ನಲ್ಲಿ ತಮ್ಮ ಚಳಕ ತೋರಿದರು.

Advertisement

ಆರೆಂಜ್‌ ಡೇ ಎಂದು ಕರೆಯಲಾದ ಕಾರ್ಯಕ್ರಮದಲ್ಲಿ ಕಲಬುರಗಿ ಮತ್ತು ಸುತ್ತಮುತ್ತಲ ಪ್ರದೇಶದ ಗ್ರಾಹಕರು ಕೆಟಿಎಂ ಬೈಕ್‌ಗಳೊಂದಿಗೆ ರೇಸ್‌ನಲ್ಲಿ ಪಾಲ್ಗೊಂಡಿದ್ದರಲ್ಲದೇ ತಜ್ಞ ಸವಾರರು ಮಾರ್ಗದರ್ಶನ ಮಾಡಿದರು. ಕೆಟಿಎಂ
200 ಡ್ನೂಕ್‌ ಮತ್ತು ಕೆಟಿಎಂ ಆರ್‌ಸಿ 200 ಬೆ„ಕ್‌ಗಳ ಮಾಲೀಕರು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. 

ರೇಸಿಂಗ್‌ನಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಬಹುಮಾನ ನೀಡಲಾಯಿತು. ಬೈಕ್‌ ಸರ್ವಿಸ್‌ ಕ್ಯಾಂಪ್‌, ಕೆಟಿಎಂ ಪವರ್‌ ಉಡುಪುಗಳು, ಬಿಡಿಭಾಗಗಳು ಲಭ್ಯವಿದ್ದವು. ಹಿನ್ನೆಲೆಯಲ್ಲಿದ್ದ ಸಂಗೀತ ಕಾರ್ಯಕ್ರಮಕ್ಕೆ ರಂಗು ತುಂಬಿತ್ತು. ಗ್ರಾಹಕರಿಗೆ ಕೆಟಿಎಂ ಬೈಕ್‌ಗಳ ನಿಕಟ ಮಾಹಿತಿ ಮತ್ತು ಸ್ವಾನುಭವ ಒದಗಿಸುವ ನಿಟ್ಟಿನಲ್ಲಿ ಕೆಟಿಎಂ ದೇಶಾದ್ಯಂತ ಆಯ್ದ ನಗರಗಳಲ್ಲಿ ಆರೆಂಜ್‌ ಡೇ ಆಯೋಜಿಸುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next