ನವದೆಹಲಿ: ಆಸ್ಟ್ರಿಯನ್ ಮೂಲದ ಕೆಟಿಎಂ ಕಂಪೆನಿ ಭಾರತದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಕೆಟಿಎಂ ಬೈಕ್ ಇಂದಿನ ಯುವಕರ ನೆಚ್ಚಿನ ದ್ವಿಚಕ್ರ ವಾಹನವಾಗಿದ್ದು ಖರೀದಿಸಲು ಮುಗಿಬೀಳುತ್ತಿದ್ದಾರೆ. ಇದೀಗ ಕೆಟಿಎಂ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿದೆ.
ಹೌದು, ಕೆಟಿಎಂ ಹೊಸ ಎಲೆಕ್ಟ್ರಿಕ್ ಸ್ಕೂಟರ್ವೊಂದನ್ನು ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲಿ ಪರಿಚಯಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಜನಪ್ರಿಯ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ತೊಡಗಿಕೊಳ್ಳುತ್ತಿವೆ.
ಈ ಹಿಂದೆ ಬಜಾಜ್ ತನ್ನ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ್ದು ಮಾತ್ರವಲ್ಲದೇ ಸಾಕಷ್ಟು ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆಗೆ ಮುಂದಾಗಿದ್ದವು. ಇದೀಗ ಕೆಟಿಎಂ ಸರದಿಯಾಗಿದ್ದು ಶೀಘ್ರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ.
ಪ್ರಮುಖವಾಗಿ ಕೆಟಿಎಂ ಮತ್ತು ಬಜಾಜ್ ಸಹಯೋಗದೊಂದಿದೆ ಕೆಟಿಎಂ ಬೈಕ್ಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಗಿತ್ತು. ಮಾತ್ರವಲ್ಲದೆ, ಶೇ. 48 ರಷ್ಟು ಪಾಲನ್ನು ಬಜಾಜ್ ಸಂಸ್ಥೆ ಹೊಂದಿದೆ ಎಂದು ತಿಳಿಸಿತ್ತು. ಆದರೇ ಕೆಲದಿನಗಳ ಹಿಂದೆ ಬಜಾಜ್ ಕಂಪೆನಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿತ್ತು. ಮಾತ್ರವಲ್ಲದೆ ಎರಡು ಸಂಸ್ಥೆಗಳ ಸಹಯೋಗದ ನಿರೀಕ್ಷೆ ಹುಸಿಯಾಗಿತ್ತು.
ಆದರೇ ಈ ಭಾರೀ ಗ್ರಾಹಕರ ಆಕರ್ಷಣೆಯನ್ನು ಸೆಳೆಯಲು ಮುಂದಾಗಿರುವ ಕೆಟಿಎಂ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಫೋಟೋಗಳನ್ನು ಮೊದಲೇ ಬಿಡುಗಡೆ ಮಾಡಿದೆ. ಈ ನೂತನ ಸ್ಕೂಟರ್ 2022ರ ಇಐಸಿಎಂ ಮೋಟಾರ್ ಶೋದಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. 2023 ವೇಳೆಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಸೂಚನೆಯಿದೆ.