Advertisement

5,912 ಕೋಟಿ ರೂ. ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ: ಕೇಂದ್ರಕ್ಕೆ ಎಚ್‌ಡಿಕೆ ಮನವಿ

09:23 AM Jun 18, 2019 | Sathish malya |

ಹೊಸದಿಲ್ಲಿ :  ಕರ್ನಾಟಕ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಇಂದು ಶನಿವಾರ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಇಲ್ಲಿ ಭೇಟಿಯಾಗಿ 5,912 ಕೋಟಿ ರೂ.ಗಳ ಪ್ರಸ್ತಾವಿತ ಕಾವೇರಿ ನದಿಯ ಮೇಕೆದಾಟು ಜಲಾಶಯ ಯೋಜನೆಗೆ ಬೇಗನೆ ಒಪ್ಪಿಗೆ ನೀಡಬೇಕೆಂದು ಕೋರಿದರು.

Advertisement

ಮಹದಾಯಿ ಮತ್ತು ಕೃಷ್ಣ ನದೀ ನೀರನ್ನು ಹಂಚಿಕೊಳ್ಳುವ ವಿಷಯದಲ್ಲಿ ಎರಡೂ ನ್ಯಾಯ ಮಂಡಳಿಗಳು ನೀಡಿರುವ ಆದೇಶದ ಬಗ್ಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಬೇಕೆಂದು ಸಿಎಂ ಕುಮಾರಸ್ವಾಮಿ ವಿನಂತಿಸಿದರು.

ಸಂಬಂಧಿತ ರಾಜ್ಯ ಸರಕಾರಗಳೊಂದಿಗೆ
ಚರ್ಚಿಸಿದ ಬಳಿಕ ಮಹದಾಯಿ ಮತ್ತು ಕೃಷ್ಣ ನದಿ ನೀರು ಕುರಿತ ಗಜೆಟ್‌ ನೊಟಿಫಿಕೇಶನ್‌ ಹೊರಡಿಸಲಾಗುವುದೆಂಬ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.

ಕೃಷ್ಣ ನದಿ ನೀರು ವಿವಾದ ನ್ಯಾಯ ಮಂಡಳಿ -2 ಕರ್ನಾಟಕಕ್ಕೆ 166 ಟಿಎಂಸಿ ಅಡಿ ನೀರನ್ನು ನೀರಾವರಿ ಮತ್ತು ಇತರ ಉದ್ದೇಶಗಳಿಗೆ ಒದಗಿಸಿದೆ. ಇದೇ ರೀತಿ ಮಹದಾಯಿ ನದಿ ನೀರು ವಿವಾದಗಳ ನ್ಯಾಯ ಮಂಡಳಿಯು ಕರ್ನಾಟಕಕ್ಕೆ 13.2 ಟಿಎಂಸಿ ಅಡಿ ನೀರನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next