Advertisement
ಟಿಕೆಟ್ ನೀಡುವ ವಿಚಾರದಲ್ಲಿ ಕೆಲವರಲ್ಲಿ ಗೊಂದಲವಿತ್ತು. ಇದು ಕೆಲವು ಬಾರಿ ವಾಗ್ವಾದಕ್ಕೂ ಕಾರಣವಾಗುತ್ತಿತ್ತು. ಟಿಕೆಟ್ ಪರಿಶೀಲಿಸುವವರು ಸರಿ ಯಾಗಿ ತಪಾಸಣೆ ನಡೆಸುತ್ತಿಲ್ಲ,ವಿನಾ ಕಾರಣ ನಿರ್ವಾಹಕರ ವಿರುದ್ಧ ದೂರು ದಾಖಲಾಗುತ್ತದೆ. ನಿರ್ವಾಹಕರು ಪ್ರಯಾಣಿಕರಿಗೆ ಕೆಲವು ಸಂದರ್ಭದಲ್ಲಿ ಟಿಕೆಟ್ ನೀಡುವುದಿಲ್ಲ ಇತ್ಯಾದಿ ಆರೋ ಪಗಳು ಬರುತ್ತಿತ್ತು. ಇದು ಕೆಎಸ್ಸಾರ್ಟಿಸಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಇದನ್ನು ಹೋಗಲಾಡಿಸಲು ಇದೀಗ ನಿಗಮ ಹೊಸ ತಂತ್ರವನ್ನು ಅಳವಡಿಸುತ್ತಿದೆ.
ಟಿಕೆಟ್ ಪರೀಕ್ಷಕರಿಗೆ ಬಸ್‌ಗಳಲ್ಲಿ ಟಿಕೆಟ್ ತಪಾಸಣೆ ಮಾಡುವಾಗ ತಮ್ಮ ಅಂಗಿಯ ಜೇಬಿಗೆ ಬಾಡಿ ಕೆಮರಾ ವನ್ನು ಅಳವಡಿಸಲಾಗುತ್ತದೆ. ಟಿಕೆಟ್ ತಪಾಸಣೆ ಮಾಡಿದ ಬಳಿಕ ಬಸ್‌ನಿಂದ ಇಳಿದಾಗ ಆ ಕೆಮರಾವನ್ನು ಆಫ್ ಮಾಡಲಾಗುತ್ತದೆ. ಅವರು ಬಸ್‌ನೊಳಗೆ ತಪಾಸಣೆ ನಡೆಸಿದ ಎಲ್ಲ ವಿಚಾರಗಳು ಆ ಕೆಮರಾದಲ್ಲಿ ರೆಕಾರ್ಡ್ ಆಗುತ್ತದೆ. ಅಧಿಕಾರಿಗಳು ಹೇಳುವಂತೆ ಸುಮಾರು ಒಂದು ತಿಂಗಳವರೆಗೆ ಈ ರೆಕಾರ್ಡ್ ಅನ್ನು ಸ್ಟೋರೇಜ್ ಮಾಡಲಾಗುತ್ತದೆ. ಟಿಕೆಟ್ ತಪಾಸಣೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಮೇಲಧಿಕಾರಿಗಳು ಈ ರೆಕಾರ್ಡ್ ಅನ್ನು ಪರಿಶೀಲನೆ ಮಾಡುತ್ತಾರೆ.
Related Articles
ಟಿಕೆಟ್ ತಪಾಸಣ ಅಧಿಕಾರಿಗಳಿಗೆ ಬಾಡಿ ಕೆಮರಾಗಳನ್ನುಈ ಹಿಂದೆಯೇ ಬಿಎಂಟಿಸಿಯಲ್ಲಿ ಅಳವಡಿಸಲಾಗಿದೆ. ಮಾರ್ಗ ತಪಾಸಣೆ ವೇಳೆ ಅಧಿಕಾರಿಗಳು, ನಿರ್ವಾಹಕರ ನಡುವೆ ವಾಗ್ವಾದಗಳು, ಜಗಳಗಳು ನಡೆಯುತ್ತಿತ್ತು. ಇದನ್ನು ಕೊನೆಗಾಣಿಸುವ ಉದ್ದೇಶದಿಂದ ತಪಾಸಣೆ ಅಧಿಕಾರಿಗಳಿಗೆ ಬಾಡಿ ಕೆಮರಾ ನೀಡಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಸುಮಾರು 80 ಬಾಡಿ ಕೆಮರಾ ಖರೀದಿಸಲು ನಿರ್ಧರಿಸಲಾಗಿತ್ತು. ಬಳಿಕ ಈಗಾಗಲೇ ಕೆಎಸ್ಸಾರ್ಟಿಸಿ, ಈಶಾನ್ಯ, ವಾಯವ್ಯ, ಕರ್ನಾಟಕ ಸಾರಿಗೆಯಲ್ಲಿಯೂ ಅಳವಡಿಸಲಾಗುತ್ತಿದೆ.
Advertisement
ಪೂರ್ಣಮಟ್ಟದಲ್ಲಿ ಅಳವಡಿಕೆಟಿಕೆಟ್ ತಪಾಸಣೆಯ ವೇಳೆ ಪಾರದರ್ಶ ಕತೆ ಕಾಪಾಡುವ ಉದ್ದೇಶದಿಂದ ಈಗಾಗಲೇ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ 10 ಬಾಡಿ ಕೆಮರಾಗಳು ಬಂದಿವೆ. ಅದರಲ್ಲಿ ಸದ್ಯ 2 ಕೆಮರಾಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸದ್ಯದಲ್ಲಿಯೇ ಪೂರ್ಣಮಟ್ಟದಲ್ಲಿ ಈ ಉಪಕ್ರಮ ಅಳವಡಿಸಲಾಗುತ್ತದೆ.
– ಕಮಲ್ ಕುಮಾರ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ