ಮಂಗಳೂರು ವಿಭಾಗದಿಂದ 5 ಎಕ್ಸ್ ಪ್ರಸ್ ಬಸ್‌ಗಳನ್ನು ತಲಾ 4 ಟ್ರಿಪ್‌ಗ್ಳಲ್ಲಿ ಓಡಿಸಲಾಗುತ್ತಿದೆ. 2 ಟ್ರಿಪ್‌ಗ್ಳಲ್ಲಿ ಸಾಕಷ್ಟು ಪ್ರಯಾಣಿಕರಿರು ತ್ತಾರೆ.
Advertisement
ನಷ್ಟ ತಪ್ಪಿಸಲು ಟ್ರಿಪ್ ಕಡಿತಈ ಹಿಂದೆ ಉಡುಪಿ ಮತ್ತು ಮಂಗಳೂರು ನಡುವೆ ಪ್ರತಿ 2 ನಿಮಿಷಕ್ಕೊಂದು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಈಗ ಪ್ರಯಾಣಿಕರ ಕೊರತೆಯಿಂದಾಗಿ ಶೇ. 60ರಷ್ಟು ಬಸ್‌ಗಳು ಮಾತ್ರ ಓಡಾಡುತ್ತಿವೆ. ಪ್ರಯಾಣಿಕರು ಹೆಚ್ಚಾಗಿರುವ ಬೆಳಗ್ಗೆ ಮತ್ತು ಸಂಜೆ ವೇಳೆ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಟ್ರಿಪ್ ಕಡಿತ ಮಾಡಲಾಗುತ್ತಿದೆ. ನಷ್ಟ ತಪ್ಪಿಸಲು ಇದು ಅನಿವಾರ್ಯ ಎನ್ನುತ್ತಾರೆ ಬಸ್ ಮಾಲಕರು.
ಲಾಕ್‌ಡೌನ್ ಮೊದಲು ಮಣಿಪಾಲ-ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುತ್ತಿದ್ದ ವೋಲ್ವೋ ಬಸ್‌ಗಳ ಬದಲಿಗೆ ಎಕ್ಸ್‌ಪ್ರೆಸ್ ಬಸ್‌ಗಳನ್ನು (ಸ್ಟೇಟ್‌ಬ್ಯಾಂಕಿನಿಂದ ಉಡುಪಿ ವರೆಗೆ) ಕೆಎಸ್‌ಆರ್‌ಟಿಸಿ ಓಡಿಸುತ್ತಿದೆ ವೋಲ್ವೋಗಳು ಪ್ರತಿ ಅರ್ಧ ಗಂಟೆಗೊಮ್ಮೆ ಓಡಾಡುತ್ತಿದ್ದವು. ಈಗ ಜನಸಂದಣಿ ಕಡಿಮೆ ಇರುವುದರಿಂದ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಬಿಡಲಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಬಸ್ ಓಡಾಟ
ಮಂಗಳೂರು-ಉಡುಪಿ ನಡುವೆ ಈ ಹಿಂದೆ ಇದ್ದ ವೋಲ್ವೋ ಬಸ್‌ಗಳ ಓಡಾಟದ ಪರವಾನಿಗೆ ಆಧಾರದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರ ಕೊರತೆ ಇರುವುದರಿಂದ ನಿರ್ದಿಷ್ಟ ಸಮಯದಲ್ಲಿ ಓಡಿಸುತ್ತಿಲ್ಲ. ಬೇಡಿಕೆ ಬಂದರೆ ಇನ್ನಷ್ಟು ಬಸ್‌ಗಳನ್ನು ಓಡಿಸಲು ಸಿದ್ಧರಿದ್ದೇವೆ. – ಅರುಣ್ ಕುಮಾರ್,
ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಮಂಗಳೂರು ಘಟಕ