ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗ ಳೂರಿನಿಂದ ಹಲವು ಹೊಸ ಮಾರ್ಗಗಳಲ್ಲಿ ಪ್ರೀಮಿಯಂ ಬಸ್ ಸೇವೆಗಳನ್ನು ಪರಿಚಯಿಸಿದೆ.
ಬೆಂಗಳೂರು-ಮನ್ನಾರ್ ನಡುವೆ ನಾನ್ ಎಸಿ ಸ್ಲೀಪರ್, ಬೆಂಗಳೂರು-ಪುಣೆ, ವಿಜಯವಾಡ, ಸಿಕಂದರಾಬಾದ್ ಮಾರ್ಗಗಳಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ಬಸ್ ಸೇವೆಯನ್ನು ಪ್ರಾರಂಭಿಸಿದೆ. ವೇಳಾಪಟ್ಟಿ ಮತ್ತು ಪ್ರಯಾಣ ದರ ಹೀಗಿದೆ.
ಬೆಂಗಳೂರಿನಿಂದ ಮನ್ನಾರ್ ಕಡೆಗೆ ರಾತ್ರಿ 9ಕ್ಕೆ ಹೊರಡುವ ಬಸ್, ಹೊಸೂರು, ಕೊಯಿಮತ್ತೂರು, ಉಡಮಲ್ಪೇಟೆ ಮೂಲಕ ಬೆಳಗ್ಗೆ 10ಕ್ಕೆ ಮನ್ನಾರ್ ತಲುಪ ಲಿದೆ. ಅದೇ ರೀತಿ, ಸಂಜೆ 5ಕ್ಕೆ ಮನ್ನಾರ್‌ನಿಂದ ಹೊರಟು, ಬೆಳಗಿನಜಾವ 6.30ಕ್ಕೆ ನಗರಕ್ಕೆ ಆಗಮಿಸಲಿದೆ. ಪ್ರಯಾಣದರ 800 ರೂ. ನಿಗದಿಪಡಿಸಲಾಗಿದೆ. ಇನ್ನು ಬೆಂಗಳೂರು-ಸಿಕಂದರಾಬಾದ್ ನಡುವಿನ ‘ಅಂಬಾರಿ’ ರಾತ್ರಿ 9.15ಕ್ಕೆ ನಗರದಿಂದ ಹೊರಡಲಿದ್ದು, ಬೆಳಿಗ್ಗೆ 7.50ಕ್ಕೆ ಸಿಕಂದ ರಾಬಾದ್ ತಲುಪಲಿದೆ. ಅಲ್ಲಿಂದ ಮತ್ತೆ ಸಂಜೆ 6.35ಕ್ಕೆ ಹೊರಟು, ಬೆಳಗಿನಜಾವ 5.50ಕ್ಕೆ ಬೆಂಗಳೂರಿಗೆ ಬರಲಿದೆ. ಪ್ರಯಾ ಣದರ 1,450 ರೂ. ಅದೇ ರೀತಿ, ನಗರ ದಿಂದ ಸಂಜೆ 7.30ಕ್ಕೆ ಹೊರಡುವ ಬೆಂಗಳೂರು- ಪುಣೆ ಅಂಬಾರಿ ಬಸ್ ದಾವಣ ಗೆರೆ, ಬೆಳಗಾವಿ ಮಾರ್ಗವಾಗಿ ಬೆಳಿಗ್ಗೆ 9.30ಕ್ಕೆ ಪುಣೆ ತಲುಪಲಿದೆ. ಅಲ್ಲಿಂದ ಸಂಜೆ 6.30ಕ್ಕೆ ಹೊರಟು, ಬೆಳಿಗ್ಗೆ 8.30ಕ್ಕೆ ನಗರಕ್ಕೆ ಆಗಮಿಸಲಿದೆ. ಪ್ರಯಾಣದರ 1,700 ರೂ. ಹಾಗೆಯೇ ಬೆಂಗಳೂರು- ವಿಜಯವಾಡ ನಡುವಿನ ‘ಅಂಬಾರಿ’ ಸಂಜೆ 5.30ಕ್ಕೆ ನಗರದಿಂದ ನಿರ್ಗಮಿಸಲಿದ್ದು, ಕೋಲಾರ, ಚಿತ್ತೂರು, ತಿರುಪತಿ ಮಾರ್ಗವಾಗಿ ಬೆಳಿಗ್ಗೆ 7.30ಕ್ಕೆ ವಿಜಯವಾಡ ತಲುಪುತ್ತದೆ. ಅಲ್ಲಿಂದ ಸಂಜೆ 6.30ಕ್ಕೆ ಹೊರಟು, ಬೆಳಿಗ್ಗೆ 7.30ಕ್ಕೆ ಬೆಂಗಳೂರು ತಲುಪಲಿದೆ. ಪ್ರಯಾಣ ದರ 1,500 ರೂ. ನಿಗದಿಪಡಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.