Advertisement
ಬೊಳ್ಳಂಬಳ್ಳಿಯಿಂದ ಬರುವ ಬಸ್ ಕಾಲ್ತೋಡು, ಹೆರಂಜಾಲು ಮೂಲಕ ಬಂದು ಖಂಬಕೋಣೆಯಿಂದ ಸಂಚರಿಸುವ ಬಸ್‌ನಲ್ಲಿ ನಿತ್ಯ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತಿತ್ತು.
ವಿದ್ಯಾರ್ಥಿಗಳು ಬಸ್‌ನಲ್ಲಿ ನೇತಾಡಿಕೊಂಡೇ ತೆರಳುವ ಪರಿಸ್ಥಿತಿಯ ಕುರಿತು ಕುರಿತು ಉದಯವಾಣಿಯು ಜೂ. 28ರಂದು ಜನಪರ ಕಾಳಜಿಯಲ್ಲಿ ವರದಿ ಪ್ರಕಟಿಸುವ ಮೂಲಕ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖೆಗಳ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿಗೆ ಸ್ಪಂದಿರುವ ಸಾರಿಗೆ ಇಲಾಖೆಯು ಈ ಭಾಗಕ್ಕೆ ದೊಡ್ಡ ಬಸ್ ಸಂಚರಿಸುವಂತೆ ಮಾಡಿದೆ. ಸರಕಾರದಿಂದ ದೊಡ್ಡ ಬಸ್ ಸಂಚರಿಸುವಂತೆ ಮಾಡಿರುವುದಿಂದ ಈ ಭಾಗ ಪ್ರತಿದಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.