Advertisement

ಪ್ರವಾಸಿಗರಿಗೆ ಕೆಎಸ್ಸಾರ್ಟಿಸಿ ಪ್ಯಾಕೇಜ್‌ ಪ್ರವಾಸ

12:10 PM Sep 15, 2017 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಗ್ರಾಮಾಂತರ ಬಸ್‌ ನಿಲ್ದಾಣದಿಂದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್‌ ಟೂರ್‌ (ದರ್ಶಿನಿ) ಆಯೋಜಿಸಲಾಗಿದೆ. ಸೆ.25 ರಿಂದ ಅ.5ರವರೆಗೆ ಈ ಪ್ಯಾಕೇಜ್‌ ಟೂರ್‌ ಲಭ್ಯವಿದ್ದು, ಮುಂಗಡ ಟಿಕೆಟ್‌ ಮೂಲಕ ಆಸನಗಳನ್ನು ಕಾಯ್ದಿರಿಸಲು ನಿಗಮದ ವೆಬ್‌ಸೈಟ್‌ www.ksrtc.in ನಲ್ಲಿ ಕಾಯ್ದಿರಿಸಬಹುದು.

Advertisement

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ. 325 ಕಿ.ಮೀ ಕ್ರಮಿಸುವ ಈ ಬಸ್‌ ಬೆಳಗ್ಗೆ 6.30ಕ್ಕೆ ಹೊರಡಲಿದೆ. ವಯಸ್ಕರಿಗೆ 350 ರೂ. ಮಕ್ಕಳಿಗೆ 175 ರೂ. ದರ ನಿಗದಿಪಡಿಸಲಾಗಿದೆ.

ಜಲದರ್ಶಿನಿ: ಬೈಲುಕುಪ್ಪೆಗೋಲ್ಡನ್‌ ಟೆಂಪಲ್‌, ದುಬಾರೆ ಆನೆ ಶಿಬಿರ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಾಸೀಟ್‌, ಹಾರಂಗಿ ಜಲಾಶಯ ಮತ್ತು ಬೃಂದಾವನ ಉದ್ಯಾನ ವೀಕ್ಷಣೆಯ ಈ ಬಸ್‌ 350 ಕಿ.ಮೀ ಕ್ರಮಿಸಲಿದೆ. ಬೆಳಗ್ಗೆ 6.30ಕ್ಕೆ ಹೊರಡಲಿದೆ. ವಯಸ್ಕರಿಗೆ 375ರೂ. ಮಕ್ಕಳಿಗೆ 190 ರೂ. ದರ.

ದೇವದರ್ಶಿನಿ: ನಂಜನಗೂಡು, ತಲಕಾಡು, ಬ್ಲಿಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ ಮತ್ತು ಕೆಆರ್‌ಎಸ್‌ಗೆ ಕರೆದೊಯ್ಯುವ ಈ ಬಸ್‌ 250 ಕಿ.ಮೀ ಕ್ರಮಿಸಲಿದ್ದು, ಬೆಳಗ್ಗೆ 6.30ಕ್ಕೆ ಹೊರಡಲಿದೆ. ವಯಸ್ಕರಿಗೆ 275 ರೂ., ಮಕ್ಕಳಿಗೆ 140 ರೂ. ದರ ನಿಗದಿಪಡಿಸಿದೆ.

ವಿಶೇಷ ಬಸ್‌ ವ್ಯವಸ್ಥೆ: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕೆಎಸ್‌ಆರ್‌ಟಿಸಿ ಯಿಂದ ವಿಶೇಷ ಮಲ್ಟಿ ಆಕ್ಸೆಲ್‌ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ದಸರಾ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಗ್ರಾಮಾಂತರ ಘಟಕದಿಂದ 8 ಮಲ್ಟಿ ಆಕ್ಸೆಲ್‌ ಬಸ್‌ಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಮೈಸೂರಿನಿಂದ ಹೈದರಾಬಾದ್‌,ಪಣಜಿ, ಪುಣೆ, ತಿರುಪತಿ, ಕೊಯಂಬತ್ತೂರ್‌, ತ್ರಿಶ್ಶೂರ್‌ ಸೇರಿದಂತೆ ಹಲವು ಕಡೆಗಳಿಗೆ ಈ ಬಸ್‌ಗಳು ಸಂಚರಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next