Advertisement
3 ಘಟಕದಿಂದ 44 ಅನುಸೂಚಿಪುತ್ತೂರು ಘಟಕ, ಧರ್ಮಸ್ಥಳ ಘಟಕ, ಬಿ.ಸಿ.ರೋಡ್ ಘಟಕ, ಮಡಿಕೇರಿ ಘಟಕದಲ್ಲಿ 524 ಅನುಸೂಚಿಗಳಿವೆ. ಹೊಸ ಘಟಕಕ್ಕೆ ಪುತ್ತೂರಿನಿಂದ 27, ಧರ್ಮಸ್ಥಳದಿಂದ 15 ಹಾಗೂ ಬಿ.ಸಿ.ರೋಡ್‌ನಿಂದ 2 ಅನುಸೂಚಿಗಳನ್ನು ವರ್ಗಾಯಿಸಲಾಗಿದೆ. ಈ 44 ಅನುಸೂಚಿಗಳನ್ನು ಇನ್ನು ಮುಂದೆ ಸುಳ್ಯ ಡಿಪೋ ನಿರ್ವಹಿಸಲಿದೆ. ಇವುಗಳಲ್ಲಿ ನಾನ್ ಎಸಿ-2, ರಾಜಹಂಸ-6, ವೇಗ-8, ಸಾಮಾನ್ಯ-28 ಬಸ್‌ಗಳು ಓಡಾಡಲಿವೆ.
ಹೊಸ ಘಟಕಕ್ಕೆ ಅನುಸೂಚಿ ವರ್ಗಾಯಿಸಿದ ಪರಿಣಾಮ ದಿನವೊಂದಕ್ಕೆ ಪುತ್ತೂರು ವಿಭಾಗಕ್ಕೆ 670 ಕಿ.ಮಿ. ಹಾಗೂ 15 ಸಾವಿರ ರೂ. ಖರ್ಚು ಉಳಿತಾಯವಾಗಲಿದೆ. ಈ ಹಿಂದೆ 44 ಅನು ಸೂಚಿಗಳಲ್ಲಿ ಓಡಾಟ ನಡೆಸುವ ಬಸ್‌ಗಳು 14,109 ಕಿ.ಮಿ. ದೂರ ಸಂಚರಿಸಬೇಕಿತ್ತು. ಈಗ 13,436 ಕಿ.ಮೀ.ಗೆಕ್ಕೆ ಇಳಿಯಲಿದೆ. ನಾನ್ ಎಸಿ 690 ಕಿ.ಮೀ., ರಾಜಹಂಸ – 2070 ಕಿ.ಮೀ., ವೇಗ- 3194 ಕಿ.ಮೀ, ಸಾಮಾನ್ಯ 7,482 ಕಿ.ಮೀ. ಸಂಚರಿಸಲಿವೆ.
ಸುಳ್ಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಕೆಎಸ್‌ಆರ್‌ಟಿಸಿ ಘಟಕ.
Related Articles
ಪುತ್ತೂರು ಘಟಕದಿಂದ 40 ಚಾಲಕರು (ಸ್ಪೇರ್ ಸೇರಿ), ಬಿ.ಸಿ. ರೋಡ್‌ನಿಂದ 4, ಧರ್ಮಸ್ಥಳದಿಂದ 23 ಮಂದಿ ಸೇರಿ 67 ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪುತ್ತೂರು ಘಟಕದ ಆಡಳಿತ ವ್ಯಾಪ್ತಿಯೊಳಗಿನ ಸುಳ್ಯ ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣ ಮತ್ತು ಬೆಳ್ಳಾರೆ ಸಂಚಾರ ನಿಯಂತ್ರಣ ಕೇಂದ್ರಗಳು ಸುಳ್ಯ ಘಟಕದ ವ್ಯಾಪ್ತಿಗೆ ಸೇರಿದೆ.
Advertisement
ಪುತ್ತೂರು ವಿಭಾಗಮಂಗಳೂರು ವಿಭಾಗದಿಂದ ಆಡಳಿತಾತ್ಮಕವಾಗಿ ವಿಭಜನೆಗೊಂಡು 2011 ರಲ್ಲಿ ಪುತ್ತೂರು ವಿಭಾಗ ಆರಂಭಗೊಂಡಿತ್ತು. ಈ ವಿಭಾಗವು ಎರಡು ಜಿಲ್ಲೆ ಹಾಗೂ 6 ತಾಲೂಕು ವ್ಯಾಪ್ತಿ ಹೊಂದಿದೆ. 546 ವಾಹನಗಳಿದ್ದು, ನಿತ್ಯವೂ 1.82 ಲ.ಕಿ.ಮೀ ದೂರ ಸಂಚರಿಸಿ, 2 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆೆ. ದ.ಕ ಜಿಲ್ಲೆಯ 244 ಹಳ್ಳಿ ಹಾಗೂ ಕೊಡಗು ಜಿಲ್ಲೆಯ 210 ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. 2016-17 ನೇ ಸಾಲಿನಲ್ಲಿ ಹಳೆ ವಾಹನ ಬದಲಾಯಿಸಿ 55 ಹೊಸ ವಾಹನ ನೀಡಲಾಗಿದೆ. ಇನ್ನೂ 89 ಹೊಸ ಬಸ್‌ಗಳ ಆವಶ್ಯಕತೆ ಇದೆ. ತುಮಕೂರು ವಿಭಾಗದ ಬಳಿಕ ಪುತ್ತೂರು ವಿಭಾಗ ಗರಿಷ್ಠ ಬಸ್ ಪಾಸ್ ಹೊಂದಿದ್ದು, ಈಗಾಗಲೇ 35 ಸಾವಿರ ವಿದ್ಯಾರ್ಥಿಗಳಿಗೆ ವಿತರಣೆಯಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಈಗಷ್ಟೆ ಆರಂಭಗೊಂಡಿದೆ. 1481 ಎಂಡೋಸಂತ್ರ ಸ್ತರಿಗೆ ಪಾಸ್ ಸೌಲಭ್ಯ ಒದಗಿಸಲಾಗಿದೆ. ಪುತ್ತೂರಿನ ಹೊರೆ ಇಳಿಕೆ
ಹೊಸ ಘಟಕದ ಸ್ಥಾಪನೆಯಿಂದ ಪುತ್ತೂರು ಘಟಕದ ಹೊರೆ ಇಳಿಕೆ ಆಗಲಿದೆ. ಇಲ್ಲಿಂದ 162 ಅನುಸೂಚಿ ಮಾರ್ಗಗಳಿಂದ 27 ಅನುಸೂಚಿಗಳನ್ನು ಸುಳ್ಯಕ್ಕೆ ವರ್ಗಾಯಿಸಲಾಗಿದೆ. ಈ ಬಸ್‌ಗಳ ನಿರ್ವಹಣೆ ಹೊಣೆ, ಕಚೇರಿ ಕೆಲಸ, ಹಣ ಪಾವತಿ, ಟಿ.ಸಿ ಪಾಯಿಂಟ್, ಬಸ್ ಪಾಸ್ ವಿತರಣೆ, ಡೀಸೆಲ್ ಹಾಕುವುದು ಇತ್ಯಾದಿ ಕೆಲಸ ಸುಳ್ಯ ಘಟಕಕ್ಕೆ ಸೇರಲಿದೆ. ಹೊಸದಾಗಿ 6 ಅನುಸೂಚಿ
ಸುಳ್ಯ ಘಟಕದಿಂದ ಕುಕ್ಕೆ ಸುಬ್ರಹ್ಮಣ್ಯ-ಧರ್ಮಸ್ಥಳ-ಕೊಲ್ಲೂರು ಮಾರ್ಗದಲ್ಲಿ ಬಸ್ ಸಂಚರಿಸಲಿದೆ. ಮಧ್ಯಾಹ್ನ 12.00 ಕ್ಕೆ ಸುಳ್ಯದಿಂದ ಹೊರಟು 1.35 ಕ್ಕೆ ಕುಕ್ಕೆ ಸುಬ್ರಹ್ಮಣ್ಯ, ಮಧ್ಯಾಹ್ನ ಸುಬ್ರಹ್ಮಣ್ಯ ದಿಂದ 2.30 ಕ್ಕೆ ಹೊರಟು ರಾತ್ರಿ 11 ಕ್ಕೆ ಕೊಲ್ಲೂರಿಗೆ ತಲುಪಲಿದೆ. ಮರು ದಿನ ಬೆಳಗ್ಗೆ 5.20ಕ್ಕೆ ಕೊಲ್ಲೂರಿನಿಂದ ಹೊರಟು, ಮಧ್ಯಾಹ್ನ 12.45ಕ್ಕೆ ಕುಕ್ಕೆ ಸುಬ್ರಹ್ಮಣ್ಯ, 13.45ರಿಂದ ಸುಬ್ರಹ್ಮಣ್ಯದಿಂದ ಹೊರಟು 3.05ಕ್ಕೆ ಸುಳ್ಯ ತಲುಪಲಿದೆ. ಹೊಸ ಅನುಸೂಚಿ ಸಮಯ
ಸ್ಟೇಟ್‌ಬ್ಯಾಂಕ್ ಮಾರ್ಗದಲ್ಲಿ 4 ಹೊಸ ನಾನ್‌ಸ್ಟಾಪ್ ಅನುಸೂಚಿಗಳು ಕಾರ್ಯಾಚರಿಸಲಿವೆ. ಸುಳ್ಯದಿಂದ ಅಪರಾಹ್ನ 3.30ಕ್ಕೆ ಹೊರಟು ಸಂಜೆ 5.45ಕ್ಕೆ ಸ್ಟೇಟ್‌ಬ್ಯಾಂಕ್ ತಲುಪಲಿದೆ. ಅಲ್ಲಿಂದ ಮರುದಿನ ಬೆಳಗ್ಗೆ 9ಕ್ಕೆ ಹೊರಟು 11.15 ಕ್ಕೆ ಪುನಃ ಸುಳ್ಯಕ್ಕೆ ತಲುಪಲಿದೆ. ಸುಳ್ಯ ಘಟಕದಿಂದ 4 ಗಂಟೆಗೆ ಹೊರಟು ಸಂಜೆ 6.15 ಸ್ಟೇಟ್‌ಬ್ಯಾಂಕ್‌ಗೆ, ಮರುದಿನ ಬೆಳಗ್ಗೆ 10ಕ್ಕೆ ಹೊರಟು, 12.15 ಸುಳ್ಯಕ್ಕೆ ತಲುಪಲಿದೆ. ಇನ್ನೆರಡು ಸಮಯದಲ್ಲೂ ಸುಳ್ಯ ಮತ್ತು ಸ್ಟೇಟ್ ಬ್ಯಾಂಕ್ ಮಧ್ಯೆ ಬಸ್ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾನ್‌ಸ್ಟಾಪ್ ಸೇವೆಗೆ ವೇಗದೂತ ದರ ವಿಧಿಸಿ, ಜಾಲ್ಸೂರು, ಪುತ್ತೂರು, ಮೇಲ್ಕಾರ್, ಬಿಸಿರೋಡ್‌ಗಳಲ್ಲಿ ಮಾತ್ರ ನಿಲುಗಡೆಗೆ ಅವಕಾಶವಿದೆ. ಪ್ರಯಾಣಿಕರಿಗೂ ಅನುಕೂಲ
ಈ ಹಿಂದೆ ಪುತ್ತೂರು, ಧರ್ಮಸ್ಥಳ, ಬಿ.ಸಿ.ರೋಡ್‌ನಿಂದ ಷೆಡ್ನೂಲ್ ಆರಂಭಿಸುತ್ತಿದ್ದ 44 ಅನುಸೂಚಿ ಮಾರ್ಗಗಳನ್ನು ಸುಳ್ಯ ಘಟಕದಿಂದಲೇ ಆರಂಭಿಸುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇನ್ನಷ್ಟು ಹೊಸ ಅನುಸೂಚಿ, ಹೊಸ ಮಾರ್ಗ ಸೇರಿಸುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ.
– ನಾಗರಾಜ ಶಿರಾಲಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಪುತ್ತೂರು ವಿಭಾಗ – ಕಿರಣ್ ಪ್ರಸಾದ್ ಕುಂಡಡ್ಕ