ನಿಗದಿತ ಕೌನ್ಸೆಲಿಂಗ್ ದಿನದಂದು ನೌಕರರು ತಪ್ಪದೆ ಹಾಜರಾಗಬೇಕು. ತಪ್ಪಿದಲ್ಲಿ ಅವರ ಅವಕಾಶ ಉಳಿದ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ. ಒಂದು ವೇಳೆ ನಿಗದಿತ ದಿನಾಂಕದಂದು ಗೈರುಹಾಜರಾಗಿ ನಂತರದಲ್ಲಿ ಅದೇ ಹುದ್ದೆಗೆ ಕೌನ್ಸೆಲಿಂಗ್ ನಡೆಯುವ ದಿನಾಂಕಗಳಂದು ಹಾಜರಾದರೆ, ಆ ದಿನಾಂಕದಂದು ಹುದ್ದೆ ಖಾಲಿ ಇರುವ ವಿಭಾಗಗಳಿಗೆ ನಿಯೋಜನೆ ಮಾಡಲಾಗುವುದು. ಕೊನೆಯ ದಿನಾಂಕದವರೆಗೂ ಹಾಜರಾಗದೆ ಇರುವ ನೌಕರರನ್ನು ಹಾಗೂ ನಿರ್ದಿಷ್ಟ ವಿಭಾಗವನ್ನು ಆಯ್ಕೆ ಮಾಡದಿರುವ ನೌಕರರನ್ನು ಕೊನೆಯಲ್ಲಿ ಉಳಿಯುವ ಹುದ್ದೆ ಲಭ್ಯವಿರುವ ವಿಭಾಗಗಳಿಗೆ ನಿಯೋಜಿಸಲಾಗುವುದು.
ಕೌನ್ಸೆಲಿಂಗ್‌ಗೆ ಹಾಜರಾಗುವ ನೌಕರರು ತಪ್ಪದೆ ಅವರ ಭಾವಚಿತ್ರ ಇರುವ ಗುರುತಿನ ಚೀಟಿ ಹಾಜರುಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
Advertisement
ಅಂತರ ನಿಗಮಗಳ ವರ್ಗಾವಣೆ ಬಯಸಿ ಒಟ್ಟಾರೆ ನಾಲ್ಕೂ ಸಾರಿಗೆ ನಿಗಮಗಳಿಂದ ಸಲ್ಲಿಸಿದ 14,418 ಅರ್ಜಿಗಳು ಊರ್ಜಿತಗೊಂಡಿದ್ದು, ಈ ಪೈಕಿ ಮೊದಲ ಹಂತದಲ್ಲಿ 3,934 ಸಿಬ್ಬಂದಿ ವರ್ಗಾವಣೆಗೆ ನಿರ್ಧರಿಸಲಾಗಿದೆ. ವರ್ಗಾವಣೆಗೊಂಡ ನೌಕರರನ್ನು ಈಗ ಜೇಷ್ಠತೆ ಆಧಾರದಲ್ಲಿ ಕೌನ್ಸೆಲಿಂಗ್ ಮೂಲಕ ನಿಯೋಜನೆ ಮಾಡಲಾಗುತ್ತಿದೆ.