Advertisement

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

04:54 PM Jun 19, 2024 | Team Udayavani |

ರಾಯಚೂರು: ಸಾರಿಗೆ ಸಂಸ್ಥೆಯ ಬಸ್ ನಲ್ಲಿ 2.50 ಲಕ್ಷ ನಗದು ಹಾಗೂ ಬ್ಯಾಂಕ್ ದಾಖಲಾತಿಗಳನ್ನು ಮರೆತು ಹೋಗಿದ್ದ ವ್ಯಕ್ತಿಗೆ ಚಾಲಕ, ನಿರ್ವಾಹಕ ಮರಳಿ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ವಾಯವಯ ಸಾರಿಗೆ ವಿಭಾಗದ ಹುಬ್ಬಳ್ಳಿ- ಹೈದರಾಬಾದ್ ಬಸ್ ನಲ್ಲಿ ನಗರದ ಸೋಮಶೇಖರ್ ಪಾಟೀಲ್ ಎನ್ನುವವರು ಮಾನ್ವಿಯಿಂದ ರಾಯಚೂರಿಗೆ ಆಗಮಿಸಿದ್ದರು. ಇವರು ಡಿಸಿ ಮನೆ ಪಕ್ಕದ ನಿಲ್ದಾಣದಲ್ಲಿಯೇ ಅವಸರದಲ್ಲಿ ಇಳಿದುಕೊಂಡಿದ್ದಾರೆ. ಬಸ್ ನಲ್ಲಿ ಹಣ ಮತ್ತು ದಾಖಲೆಗಳಿದ್ದ ಚೀಲ ಬಿಟ್ಟು ಹೋಗಿದ್ದಾರೆ. ಆದರೆ, ಚಾಲಕ ಮತ್ತು ನಿರ್ವಾಹಕ ಹೈದರಾಬಾದ್ ನಲ್ಲಿ ಬಸ್ ಸ್ವಚ್ಛಗೊಳಿಸುವಾಗ ಚೀಲ ಸಿಕ್ಕಿದೆ. ಪರಿಶೀಲಿಸಿದಾಗ ಹಣ ಇರುವುದು ಪತ್ತೆಯಾಗಿದೆ.

ಕೂಡಲೇ ಬ್ಯಾಂಕ್ ಪಾಸ್ ಬುಕ್ ನಲ್ಲಿ ಮೊಬೈಲ್ ನಂಬರ್ ಪಡೆದು ಕರೆ ಮಾಡಿದಾಗ ಹೌದು ಹಣ ಕಳೆದುಕೊಂಡಿದ್ದಾಗಿ ಪ್ರಯಾಣಿಕ ತಿಳಿಸಿದ್ದಾರೆ. ಬಸ್ ಗುರುವಾರ ಮರಳಿ ರಾಯಚೂರು ಬಸ್ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಗೆ ಬರುವಂತೆ ತಿಳಿಸಿದ್ದಾರೆ. ರಾಯಚೂರು ನಿಲ್ದಾಣಾಧಿಕಾರಿ ಶೀಲಪ್ಪ ಸಮ್ಮುಖದಲ್ಲಿ ಹಣದ ಜತೆಗೆ ಎಲ್ಲ ದಾಖಲೆಗಳನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆಯಲಾಗಿದೆ.

ಇದನ್ನೂ ಓದಿ: Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

Advertisement

Udayavani is now on Telegram. Click here to join our channel and stay updated with the latest news.

Next