ಜೇವರ್ಗಿ: ಪಟ್ಟಣದ ಕ್ರೀಡಾಂಗಣದ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಬಸ್‌ಗಳೆರಡು ಮುಖಾಮುಖಿ ಢಿಕ್ಕಿಯಾಗಿ ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿರುವ ಭೀಕರ ಅವಘಡ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬಸ್‌ಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು , ಒಂದು ಬಸ್ಸಿನ ಚಾಲಕ ,ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
10 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಮೃತ ದುರ್ದೈವಿಗಳು ಚಾಲಕ ರುಕ್ಮಪ್ಪ(45),ಪ್ರಯಾಣಿಕರಾದ ಆಯಿಷಾ ಸಿದ್ಧಿಕಾ(40),ಫರೀನಾ ಬೇಗಂ (36) ಮತ್ತು ಸಹರಾ ಖಾತುಂ(40) ಎಂದು ತಿಳಿದು ಬಂದಿದೆ.
ಮೂವರೂ ಮಹಿಳೆಯರು ವೃತ್ತಿಯಲ್ಲಿ ಶಿಕ್ಷಕಿಯರು ಎಂದು ತಿಳಿದು ಬಂದಿದೆ.
ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.