Advertisement

KSRTC Bus; ಚಿಲ್ಲರೆ ಇಲ್ಲವೆಂದದ್ದಕ್ಕೆ ಬಸ್ಸಿನಿಂದ ಇಳಿಸಿದ ನಿರ್ವಾಹಕ

01:16 AM Jan 07, 2024 | Team Udayavani |

ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ 75 ವರ್ಷ ಪ್ರಾಯದ ವೃದ್ಧವ್ಯಕ್ತಿಯನ್ನುಮಾರ್ಗ ಮಧ್ಯ ದಲ್ಲಿ ಇಳಿಸಿ ನಿರ್ವಾಹಕನೋರ್ವ ಅಮಾನವೀ ಯತೆ ತೋರಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ಜ. 6ರಂದು ನಡೆದಿದೆ.

Advertisement

ಕಲ್ಲುಗುಡ್ಡೆಯಿಂದ ಉಪ್ಪಿನಂಗಡಿಗೆ ಸಂಚರಿಸುವ ಈ ಬಸ್‌ಗೆ ಶಾಂತಿಗುರಿ ನಿವಾಸಿ ಬಾಬು ಗೌಡರು ಕಾಂಚನಕ್ಕೆ ತೆರಳಲು ಹತ್ತಿದ್ದು, ಟಿಕೆಟ್‌ ನೀಡುವ ಸಂದರ್ಭ ಅವರು 200 ರೂ. ನೋಟು ನೀಡಿದ್ದರು. ಈ ಸಂದರ್ಭ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಬಾಬು ಗೌಡರನ್ನು ಗೋಳಿಯಡ್ಕ ಎಂಬಲ್ಲಿ ಇಳಿಸಿ ಅಗೌರವ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂದೆ ಚಿಲ್ಲರೆ ಆಗುವ ವೇಳೆ ಚಿಲ್ಲರೆ ನೀಡುವಂತೆ ಬಾಬು ಅವರು ತಿಳಿಸಿದ್ದರೂ ಸ್ಪಂದಿಸದ ನಿರ್ವಾಹಕ ಹಿರಿಯ ವ್ಯಕ್ತಿಯನ್ನು ಮಾರ್ಗಮಧ್ಯೆ ಇಳಿಸಿದ್ದಾರೆ. ಬಸ್‌ ನಿರ್ವಾಹಕನ ನಡೆಗೆ ಬೇಸರ ವ್ಯಕ್ತಪಡಿಸಿದ ಬಾಬು ಅವರು, ಈ ರೀತಿ ನಡೆಸಿಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

ಬೆರಳೆಣಿಕೆ ಬಸ್‌ ಸಂಚಾರ
ತಾಲೂಕಿನ ಗ್ರಾಮಿಣ
ಭಾಗದಲ್ಲಿ ಬೆರಳಣಿಕೆಯ ಸರಕಾರಿ ಬಸ್‌ ಸಂಚರಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಇರುವ ಕಡೆಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಲೇ ಬರಲಾಗುತ್ತಿದೆ. ಆದರೆಯಾವುದೇ ಸ್ಪಂದನೆ ಇಲ್ಲ. ಇದರ ಮಧ್ಯೆ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಬಸ್‌ ಇಳಿದು ಅಮಾನವೀಯತೆ ತೋರಿದರೆ ಸಾರ್ವಜನಿಕರು ಹೇಗೆ ಪ್ರಯಾಣಿಸುವುದು ಎಂದು ಪ್ರಶ್ನಿಸುವಂತಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next