ಬೆಳ್ತಂಗಡಿ: ವಿವಿಧ ಬೇಡಿಕೆ ಮುಂದಿಟ್ಟು ಸಾರಿಗೆ ನೌಕರರ ನಡೆಸಿರುವ ಮುಷ್ಕರದ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲೂ ಕೆಎಸ್ ಆರ್ ಟಿಸಿ ಬಸ್ಸುಗಳು ಓಡಾಟ ಸ್ತಬ್ಧಗೊಂಡಿದೆ.
ಮಂಗಳವಾರ ಸಂಜೆ ಧರ್ಮಸ್ಥಳ ಡಿಪ್ಪೋದಲ್ಲಿ ತಂಗಿದ್ದ ಹುಬ್ಬಳಿ, ಚಿಕ್ಕಮಗಳೂರು, ಕೊಳ್ಳೇಗಾಲ ಬಸ್ ಗಳು ಮುಂಜಾನೆ ಮರಳಿ ಸಂಚರಿಸಿದೆ. ಅದರ ಹೊರತಾಗಿ ಯಾವುದೇ ಕೆಎಸ್ಆರ್ ಟಿಸಿ ಬಸ್ ಓಡಾಟ ನಡೆಸಿಲ್ಲ.
ಧರ್ಮಸ್ಥಳ, ಮಂಗಳೂರು, ಪುತ್ತೂರು, ಉಪ್ಪಿನಂಗಡಿ, ಮೂಡುಬಿದ್ರೆ ಸೇರಿದಂತೆ ಪ್ರಮುಖ ಕಡೆಗಳಿಗೆ ಖಾಸಗಿ ಬಸ್ ಒಡಾಟ ನಡೆಸಿವೆ.
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ – ರಸ್ತೆಗೆ ಇಳಿಯದ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ಗಳು
ಖಾಸಗಿ ಬಸ್ ಮಾಲಕರು ಹೆಚ್ಚುವರಿ ಬಸ್ ಓಡಾಟ ನಡೆಸಿದೆ. ಹೀಗಾಗಿ ಹೆಚ್ಚಿನ ತೊಂದರೆ ಕಂಡುಬಂದಿಲ್ಲ.
ಕೊಯ್ಯೂರು, ಬೆಳಾಲು, ದಿಡುಪೆ ಸಂಚಾರಕ್ಕೆ ಖಾಸಗಿ ಟೆಂಪೋ, ರಿಕ್ಷಾ, ಜೀಪ್ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿತ್ತು.
ಇದನ್ನೂ ಓದಿ:ಬಂಟ್ವಾಳದಲ್ಲೂ ಸಾರಿಗೆ ಸಂಚಾರ ಬಂದ್: ಖಾಸಗಿ ಬಸ್, ಕ್ಯಾಬ್ ಗಳತ್ತ ಮುಖ ಮಾಡಿದ ಜನ
ಖಾಸಗಿ ಬಸ್ ಮುಷ್ಕರ ಮುಂಚಿತವಾಗಿಯೇ ತಿಳಿದಿದ್ದ ಸಾರ್ವಜನಿಕರು ದೂರದೂರಿನ ಪ್ರಯಾಣ ಮೊಟಕುಗೊಳಿಸಿದ್ದರಿಂದ ಹೆಚ್ಚಿನ ಸಮಸ್ಯೆ ಕಂಡುಬಂದಿಲ್ಲ.