Advertisement
ಕಾಸರಗೋಡು- ಮಂಗಳೂರು ನಡುವೆ ಸಂಚರಿಸುವ ಬಸ್ ಆಗಿದ್ದು, ಕೇರಳ ಕೆಎಸ್ಆರ್ಟಿಸಿಯ ಇನ್ನೊಂದು ಬಸ್ನೊಂದಿಗೆ ಕಾಂಪಿಟೀಶನ್ ಮಾಡಿಕೊಂಡು ಪಿವಿಎಸ್ ಜಂಕ್ಷನ್ ನಿಂದ ಎಂಜಿ ರಸ್ತೆಗೆ ಚಾಲಕ ನಿರ್ಲಕ್ಷ್ಯ ಮತ್ತು ಅತೀ ವೇಗದ ಚಾಲನೆಯೊಂದಿಗೆ ಬಂದಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ಗೆ ಢಿಕ್ಕಿಯಾಗಿದ್ದು, ಈ ವೇಳೆ ಪಕ್ಕದಲ್ಲಿದ್ದ ಬೈಕ್ ಕೂಡಾ ಮಗುಚಿ ಬಿದ್ದಿದೆ. ದ್ವಿಚಕ್ರ ವಾಹನದಲ್ಲಿ ಯಾರೂ ಇಲ್ಲದಿದ್ದುದರಿಂದ ಅನಾಹುತ ತಪ್ಪಿದೆ.
ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು ಆಗಮಿಸಿ ಪರಿಶೀ ಲಿಸಿದ್ದು, ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದಕ್ಕೆ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಕೆಎಸ್ಆರ್ಟಿಸಿ ಬಸ್ಸನ್ನು ಬಿಟ್ಟು ಕಳುಹಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಯಿತು.