ಬೆಂಗಳೂರು: ಬೆಂಗಳೂರು- ಮೈಸೂರು ಹೆದ್ದಾರಿ ಟೋಲ್ ಶುಲ್ಕದ ಬಿಸಿ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೂ ತಟ್ಟಿದೆ.
ಉದ್ದೇಶಿತ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ- 275ರ ಮೂಲಕ ಕಾರ್ಯಾಚರಣೆ ಮಾಡುವ ನಿಗಮದ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಳಕೆ ಶುಲ್ಕದ ರೂಪದಲ್ಲಿ ಕನಿಷ್ಠ 15 ರೂ.ಗಳಿಂದ ಗರಿಷ್ಠ 20 ರೂ. ವಸೂಲು ಮಾಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದ್ದು, ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದೆ.
ಬಳಕೆ ಶುಲ್ಕವನ್ನು ಆಯಾ ಬಸ್‌ಗಳಲ್ಲಿ ಟಿಕೆಟ್ ದರದಲ್ಲಿ ವಸೂಲು ಮಾಡಲಾಗುತ್ತದೆ. ಇದರಿಂದ ಕರ್ನಾಟಕ ಸಾರಿಗೆ ಬಸ್ ಪ್ರಯಾಣ ದರದಲ್ಲಿ 15 ರೂ., ರಾಜಹಂಸ ಪ್ರಯಾಣ ದರದಲ್ಲಿ 18 ರೂ. ಹಾಗೂ ಐರಾವತ ಮಲ್ಟಿ ಆ್ಯಕ್ಸೆಲ್ ಬಸ್‌ಗಳ ಪ್ರಯಾಣ ದರದಲ್ಲಿ 20 ರೂ. ಹೆಚ್ಚಳ ಮಾಡಲಾಗಿದೆ.
ಎಕ್ಸ್‌ಪ್ರೆಸ್ ಹೈವೇ ಮೂಲಕ ಪ್ರಯಾಣಿಸು ಬಸ್‌ಗಳಿಗೆ ಮಾತ್ರ ಈ ದರ ಅನ್ವಯ ಆಗಲಿದ್ದು, ಟೋಲ್ ಶುಲ್ಕ ಸರಿದೂಗಿಸಲು ಈ ದರ ಏರಿಕೆ ಮಾಡಲಾಗಿದೆ ಎಂದು ನಿಗಮದ ಪ್ರಕಟಣೆ ಸ್ಪಷ್ಟಪಡಿಸಿದೆ.
ಕರ್ನಾಟಕ ಸಾರಿಗೆ ನಿತ್ಯ 20, ರಾಜಹಂಸ 17, ವೋಲ್ವೋ 15 ಹಾಗೂ ಮಲ್ಟಿ ಆ್ಯಕ್ಸೆಲ್ ವೋಲ್ವೋ 55 ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.
ಇದನ್ನೂ ಓದಿ: ಹೊಸ ರಾಜ್ಯ ರಚನೆಗೆ ಸರ್ಕಾರದ ಪರಿಗಣನೆಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ: ಕೇಂದ್ರ ಸರ್ಕಾರ