Advertisement
ಹೌದು, ಕರ್ನಾಟಕ-ಕೇರಳ ನಡುವೆ ನಿತ್ಯ 168 ಅನುಸೂಚಿ (ಶೆಡ್ಯುಲ್)ಗಳು ಕಾರ್ಯಾಚರಣೆ ಮಾಡುತ್ತವೆ. ಆದರೆ, ಈಗ ಕೇರಳದಲ್ಲಿ “ನಿಪ’ ಭೀತಿ ಉಂಟಾಗಿದೆ. ಇದರಿಂದ ಉದ್ದೇಶಿತ ಎರಡೂ ರಾಜ್ಯಗಳ ನಡುವೆ ಕರ್ತವ್ಯನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರಲ್ಲಿ ಆತಂಕ ಮನೆ ಮಾಡಿದೆ.
ನೌಕರರು ದೇಶಾದ್ಯಂತ ಸುದ್ದಿ ಮಾಡಿರುವ ವೈರಸ್ ಕಾಣಿಸಿಕೊಂಡ ಪ್ರದೇಶಕ್ಕೆ ಹೋಗಿ ಬರುತ್ತಾರೆ. ಹಾಗಾಗಿ,
ಸಜಹವಾಗಿ ಭಯ ಕಾಡುತ್ತಿರುವ ಸಾಧ್ಯತೆ ಇದೆ. ಆದರೆ, ಯಾರೊಬ್ಬರೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿಲ್ಲ. ಸೇವೆ
ಮತ್ತು ಪ್ರಯಾಣಿಕರ ಓಡಾಟ ಎಂದಿನಂತೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ: ಕೆಎಸ್‌ಆರ್‌ಟಿಸಿಯಿಂದ ಕೇರಳಕ್ಕೆ ನಿತ್ಯ 168 ಶೆಡ್ಯುಲ್‌ಗಳು ಕಾರ್ಯಾಚರಣೆ
ಮಾಡುತ್ತವೆ. ಇದರಲ್ಲಿ ಬೆಂಗಳೂರು ವಿಭಾಗದ 25 ಪ್ರೀಮಿಯಂ ಬಸ್‌ಗಳೂ ಇವೆ. ಆ ಪೈಕಿ “ನಿಪ’ ಕಾಣಿಸಿಕೊಂಡ ಕ್ಯಾಲಿಕಟ್‌ಗೆ ಹೋಗುವ ಬಸ್‌ಗಳ ಸಂಖ್ಯೆ ಕೇವಲ ಎರಡು. ಅಲ್ಲದೆ, ಚಾಲಕರು, ನಿರ್ವಾಹಕರು ಅಲ್ಲಿರುವುದು ಎರಡು ತಾಸುಗಳು ಮಾತ್ರ. ಇನ್ನು ಉಳಿದ ಶೆಡ್ಯುಲ್‌ಗಳು ಪುತ್ತೂರು,ಮಂಗಳೂರು, ಚಾಮರಾಜನಗರ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಕಾರ್ಯಾಚರಣೆ ಮಾಡುತ್ತವೆ. ಆ ನೌಕರರ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.
Related Articles
ಕೆಎಸ್‌ಆರ್‌ಟಿಸಿ ಪ್ರಧಾನ ವ್ಯವಸ್ಥಾಪಕ(ಸಂಚಾರ) ವಿಶ್ವನಾಥ್ ಸ್ಪಷ್ಟಪಡಿಸಿದರು.
Advertisement
ಕರ್ನಾಟಕ-ಕೇರಳ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆ ಮಾಡುವುದರಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ನಿಗಮಕ್ಕೂ ಸೂಚಿಸಲಾಗಿದೆ. ಆ ಮಾರ್ಗದ ಬಸ್‌ಗಳಲ್ಲೂ “ನಿಪ’ ಬಗ್ಗೆ ಜಾಗೃತಿ ಮೂಡಿಸುವಂತಹ ಸಂದೇಶಗಳನ್ನು ಬಿತ್ತರಿಸುವಂತೆ ಮನವಿ ಮಾಡಲಾಗಿದೆ ಎಂದು ನಗರ ಜಿಲ್ಲಾಧಿಕಾರಿ ಕೆ.ದಯಾನಂದ ತಿಳಿಸಿದರು.