Advertisement
ಕಳೆದ 15 ದಿನಗಳಿಂದ ಮುಷ್ಕರ ನಿರತರಾಗಿದ್ದು,ಕೆಲಸಕ್ಕೆ ಗೈರು ಹಾಜರಾಗಿದ್ದ ಸಾರಿಗೆ ನೌಕರರು ಹೈಕೋರ್ಟ್ ಆದೇಶ ಗೌರವಿಸಿ ಗುರುವಾರದಿಂದ ರಾಜ್ಯಾದ್ಯಂತ ಕೆಲಸಕ್ಕೆ ಹಾಜರಾಗಲು ಮುಂದಾಗಿ ದ್ದಾರೆ.ಸಂಸ್ಥೆಯು ನಿಗದಿಪಡಿಸಿರುವಂತೆ ಕೋವಿಡ್ ಪರೀಕ್ಷೆಮಾಡಿಸಲು ಬಹುತೇಕ ಸಿಬ್ಬಂದಿ ಒಪ್ಪಿಗೆ ಸೂಚಿಸಿಕೋವಿ ಡ್ ತಪಾಸಣೆಗೊಳಗಾಗುತ್ತಿದ್ದಾರೆ.
Related Articles
Advertisement
ಜಾಮೀನು: 2 ದಿನಗಳ ಹಿಂದೆ ನಿಷೇಧಾಜ್ಞೆ ಉಲ್ಲಂ ಸಿಗುಂಪು ಸೇರಿ ಪ್ರತಿಭಟನೆಗೆ ಮುಂದಾದರೆಂಬ ಕಾರಣಕ್ಕೆಬಂಧನಕ್ಕೊಳಗಾಗಿದ್ದ 32 ಮಂದಿಗೆ ನ್ಯಾಯಾಲಯಗುರುವಾರ ಜಾಮೀನು ಮಂಜೂರು ಮಾಡಿದೆ.ಪ್ರತಿಭಟನೆ ನಿರತ ನೌಕರರನ್ನು ಪೊಲೀಸರುಬಂಧಿಸಿದ್ದು, ಇದನ್ನು ಪ್ರತಿಭಟಿಸಿದ ನೌಕರರ ಗುಂಪನ್ನುಪೊಲೀಸರು ಲಾಠಿ ಬೀಸಿ ಚದುರಿಸಿದ್ದರು.
ಈ ಘಟನೆಯಲ್ಲಿ ಬಂಧಿತರಾದ ಎಲ್ಲಾ 32 ಸಾರಿಗೆನೌಕರರ ಪರವಾಗಿ ಸಿಎಂಆರ್ ಟೊಮೆಟೋ ಮಂಡಿಮಾಲೀಕ ಶ್ರೀನಾಥ್ ವಕೀಲರನ್ನಿಟ್ಟು ನ್ಯಾಯಾಲಯಮುಂದೆ ಅರ್ಜಿ ಸಲ್ಲಿಸಿ ಜಾಮೀನು ಮಂಜೂರುಮಾಡಿಸಿಕೊಳ್ಳುವಲ್ಲಿ ನೆರವಾಗಿದ್ದಾರೆ. ಇವರಿಗೆ ಸಾರಿಗೆನೌಕರರು ಕೃತಜ್ಞತೆ ಅರ್ಪಿಸಿದ್ದಾರೆ.
ಬಸ್ಗಳ ಓಡಾಟ: ಕೋಲಾರ ನಗರ ಸೇರಿ ಜಿಲ್ಲಾದ್ಯಂತಎಲ್ಲಾ ಡಿಪೋಗಳಿಂದಲೂ ಸಾರಿಗೆ ಬಸ್ ಓಡಾಟಆರಂಭವಾಯಿತು. ಆದರೆ, ತಪ್ಪೊಪ್ಪಿಗೆ ಪತ್ರದಅಡೆತಡೆಯಿಂದಾಗಿ ನೌಕರರು ಪೂರ್ಣ ಪ್ರಮಾಣದಲ್ಲಿಕೆಲಸಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಆರಂಭವಾದಬಸ್‌ಗಳಲ್ಲಿಯೂ ಸರ್ಕಾರ ಕೋವಿಡ್ ಮಾರ್ಗಸೂಚಿಬಂದ್ ಪರಿಣಾಮ ಪ್ರಯಾಣಿಕರ ಸಂಖ್ಯೆ ತೀರಾಕಡಿಮೆಯಾಗಿದ್ದು ಕಂಡು ಬಂದಿತು.