Advertisement
ದ.ಕ.ದಲ್ಲಿ ಇಂದಿನಿಂದ ಸೇವೆದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಈ ಹಿಂದೆ ಪ್ರತೀ ದಿನ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಗೆ ಸುಮಾರು 50ಕ್ಕೂ ಮಿಕ್ಕಿ ಹವಾ ನಿಯಂತ್ರಿತ ಬಸ್‌ಗಳು ಸಂಚರಿಸುತ್ತಿತ್ತು. ಆದರೆ, ಕೊರೊನಾ ಆತಂಕ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಎಲ್ಲ ರೀತಿಯ ಸಾರ್ವಜನಿಕ ಬಸ್ ಸೇವೆ ನಿಲ್ಲಿಸಲಾಗಿತ್ತು. ಆದರೆ, ಇದೀಗ ಜೂ.25ರಿಂದ ಮತ್ತೆ ಬಸ್ ಕಾರ್ಯಾಚರಣೆ ಆರಂಭವಾಗಲಿದೆ.
ಉಡುಪಿ ಜಿಲ್ಲೆಗೆ ಸಂಬಂಧಿಸಿದ ಕೆಎಸ್ಸಾರ್ಟಿಸಿ ಎಸಿ ಬಸ್‌ಗಳು ಮಂಗಳೂರು ಹಾಗೂ ಬೆಂಗಳೂರು ಡಿಪೋದಲ್ಲಿ ಇವೆ.
ಜೂ. 26ರಿಂದ ಉಡುಪಿಯಿಂದ ಬೆಂಗಳೂರು, ಮೈಸೂರಿಗೆ ಕೆಎಸ್ಸಾರ್ಟಿಸಿ ಎ.ಸಿ. ಬಸ್ ಸಂಚಾರ ಪ್ರಾರಂಭವಾಗಲಿದೆ.
ಭಟ್ಕಳ-ಮಂಗಳೂರು ನಡುವಿನ ಎ.ಸಿ. ಬಸ್‌ಗಳನ್ನು ಜನರ ಬೇಡಿಕೆಯನುಸಾರ ಓಡಿಸಲಾಗುವುದು ಉಡುಪಿ ಡಿಪೋ ಮ್ಯಾನೇಜರ್ ಉದಯ ಕುಮಾರ್ ತಿಳಿಸಿದರು. ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಗಳಿಂದ ನಾನ್ ಎ.ಸಿ. ಸ್ಲಿàಪರ್ ಬಸ್ ಸೇವೆ ಈಗಾಗಲೇ ಆರಂಭಗೊಂಡಿತ್ತು. ಮಂಗಳೂರು ವಿಭಾಗಗಳಿಂದ ವಿವಿಧ ಭಾಗಗಳಿಂದ ಈಗಾಗಲೇ ಒಂದೆರಡು ಸ್ಲೀಪರ್ ಬಸ್ ಸೇವೆ ಆರಂಭಗೊಂಡಿದೆ. ಅದೇ ರೀತಿ ಪುತ್ತೂರು, ಧರ್ಮಸ್ಥಳ, ಸುಳ್ಯ ಮತ್ತು ಮಡಿಕೇರಿ ಡಿಪೋದಿಂದಲೂ ಸ್ಲೀಪರ್ ಬಸ್ ಕಾರ್ಯಾಚರಣೆ ನಡೆಸುತ್ತಿದೆ.
Related Articles
ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲಕ್ಕೆ ಎಸಿ ಬಸ್ ಸಂಚಾರ ಆರಂಭ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ 8 ಎಸಿ ಬಸ್‌ಗಳು ಸಂಚರಿಸುತ್ತಿದ್ದವು.
Advertisement