ಬೆಂಗಳೂರು: ಪಾದರಾಯನಪುರ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಕೆಎಸ್‌ಆರ್‌ಪಿಯ ಐವರು ಕಾನ್ಸ್‌ಸ್ಟೇಬಲ್‌ಗಳಿಗೆ ಕೋವಿಡ್ 19 ಮಹಾಮಾರಿ ಸೋಂಕು ತಗುಲಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೋರಮಂಗಲದಲ್ಲಿ 4ನೇ ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಈ ಐವರು ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 30 ಮಂದಿ ಪಟ್ಟಿ ಮಾಡಿದ್ದು, ಪ್ರತಿಯೊಬ್ಬರನ್ನೂ ಕ್ವಾರಂಟೈನ್ ಮಾಡಲಾಗಿದೆ.
ಇನ್ನಷ್ಟು ಮಂದಿ ಇರುವ ಸಾಧ್ಯತೆಯಿದ್ದು, ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಪಿ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಪಿ ತುಕಡಿಗಳನ್ನು ಪಾದರಾಯಯನಪುರ ಹಾಗೂ ಕಂಟೈನ್ಮೆಂಟ್ ಜೋನ್‌ನಲ್ಲಿ ಭದ್ರತೆಗೆ ಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸೋಂಕು ತಗುಲಿರುವ ಸಾಧ್ಯತೆಯಿದೆ. ಕೆಲವೊಂದು ರೋಗ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲಾಗಿತ್ತು.
ಮಂಗಳವಾರವಷ್ಟೇ ವರದಿ ಬಂದಿದ್ದು, ಐವರಿಗೆ ಸೋಂಕು ದೃಢಪಟ್ಟಿದೆ ಎಂದು ಕೆಎಸ್‌ಆರ್‌ಪಿ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರತಿಕ್ರಿಯೆ ನೀಡಿದ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್, ಐವರಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದೆ. ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರ ಪಟ್ಟಿ ಸಿದಟಛಿಪಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಬಿಸಿ ನೀರನ್ನೆ ಕುಡಿಯಬೇಕು. ನಿಮ್ಮ ಕುಟುಂಬ ಸದಸ್ಯರಿಗೂ ಅದೇ ಸಲಹೆ ನೀಡಬೇಕು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಲಾಖೆಯಿಂದಲೇ ಪರೀಕ್ಷೆ: ಕೆಎಸ್‌ಆರ್‌ಪಿ ಸಿಬ್ಬಂದಿಗೆ ಇಲಾಖೆಯಿಂದಲೇ ಕೋವಿಡ್ 19 ಪರೀಕ್ಷೆ ಮಾಡಿಸಲಾಗುತ್ತಿದೆ. ಒಂದು ವೇಳೆ ವೈಯಕ್ತಿಕ ಕಾರಣ ನೀಡಿ ಹೊರ ಜಿಲ್ಲೆಗಳಿಗೆ ತೆರಳಿದ್ದರೆ ಮಾತ್ರ ಸ್ವಂತ ಹಣದಲ್ಲಿ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣ ಪತ್ರ ತರಬೇಕು ಎಂದು ಹೇಳಿದರು.
ಮನೆ ಮಾಡಿದ ಕೋವಿಡ್ 19 ಆತಂಕ: ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್‌ನಲ್ಲಿ ಕೋವಿಡ್ 19 ಕಾಣಿಸಿಕೊಂಡಿ ರುವುದರಿಂದ ಇಡೀ ಆವರಣದಲ್ಲಿ ಆತಂಕ ಮನೆ ಮಾಡಿದೆ. ಸೋಂಕಿತರ ಮನೆಗಳ ಬಳಿ ಯಾರೂ ಹೋಗದಂತೆ ಸೂಚಿಸಲಾಗಿದ್ದು, ಅವರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಇನ್ನು ತರಬೇತಿ ಪಡೆಯು ತ್ತಿರುವ ಸಿಬ್ಬಂದಿಗೂ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿ.ಟಿ.ಮಾರುಕಟ್ಟೆ ಸಂಚಾರ ಠಾಣೆ ಸೀಲ್‌ಡೌನ್: ಸಿ.ಟಿ.ಮಾರುಕಟ್ಟೆ ಸಂಚಾರ ವಿಭಾಗ ಪೊಲೀಸ್ ಠಾಣೆ ಎಎಸ್‌ಐ ಸೇರಿ ಮೂವರಿಗೆ ಕೋವಿಡ್ 19 ಸೋಂಕು ತಗುಲಿದ್ದು, ಪೊಲೀಸ್ ಠಾಣೆಯನ್ನು 5 ದಿನ ಸೀಲ್‌ಡೌನ್ ಮಾಡಲಾಗಿದೆ. ಈ ಹಿಂದೆ ಸಿ.ಟಿ.ಮಾರುಕಟ್ಟೆ ಕಾನೂನು ಸುವ್ಯವಸ್ಥೆ ಠಾಣೆಯ ಎಎಸ್‌ಐವೊಬ್ಬರಿಗೆ ಕೋವಿಡ್ 19 ದೃಢಪಟ್ಟಿತ್ತು. ಅವರ ದ್ವಿತೀಯ ಸಂಪರ್ಕದಲ್ಲಿದ್ದ 59 ವರ್ಷದ ಎಎಸ್‌ಐ, 48 ವರ್ಷದ ಇಬ್ಬರು ಕಾನ್ಸ್‌ಸ್ಟೇಬಲ್‌ಗಳಿಗೆ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದೆ.
ಠಾಣೆಗೆ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಜತೆಗೆ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 62 ಮಂದಿಯನ್ನು ಕ್ವಾರಂ ಟೈನ್ ಮಾಡಲಾಗಿದೆ. ಠಾಣೆ ಕಾರ್ಯನಿರ್ವಹಣೆಯನ್ನು .ಆರ್.ಮಾರುಕಟ್ಟೆ ಸಂಚಾರ ಠಾಣೆ ಹೊರ ಠಾಣೆ(ಔಟ್ ಪೋಸ್ಟ್)ಗೆ ವರ್ಗಾಹಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.