Advertisement

ಕೋವಿಡ್-19 ಕರ್ತವ್ಯ ನಿಭಾಯಿಸಿದ ಶಿಕ್ಷಕರಿಗೆ ‘EL’ ನೀಡುವಂತೆ KSPSTA ಮನವಿ

09:24 PM Aug 23, 2021 | Team Udayavani |

ಧಾರವಾಡ : ಕೋವಿಡ್-19 ಸಂದರ್ಭದಲ್ಲಿ ಕರ್ತವ್ಯ ನಿಭಾಯಿಸಿದ ಶಿಕ್ಷಕರಿಗೆ ಗಳಿಕೆಯ ರಜೆ (EL) ಕಲ್ಪಿಸುವಂತೆ ಆಗ್ರಹಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(KSPSTA)ಧಾರವಾಡ ತಾಲೂಕಾ ಘಟಕದವತಿಯಿಂದ ತಹಶೀಲ್ದಾರಾದ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಇಂದು (ಆ.23) ಕಚೇರಿಗೆ ತೆರಳಿದ ಸಂಘದ ಸದಸ್ಯರು, ಮಹಾಮಾರಿ ಕೊವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುವ ಮೂಲಕ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಸಹಕರಿಸಿದೆ.

ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದ ಸೋಂಕಿನ ಭಯದ ನಡುವೆಯೂ ಚೆಕ್ ಪೊಸ್ಟ್ ಹಾಗೂ ಆರೋಗ್ಯದ ಕುರಿತು ಮನೆ ಮನೆ ತೆರಳಿ ಸಮೀಕ್ಷೆ ನಡೆಸಲಾಗಿದೆ. ಈ ಹಿನ್ನೆಲೆ ರಜೆಯ ಸಮಯದಲ್ಲೂ ಕರ್ತವ್ಯ ನಿರ್ವಹಿಸಿದ್ದರಿಂದ ಶಿಕ್ಷಕರಿಗೆ ಗಳಿಕೆ ರಜೆ ನೀಡುವಂತೆ ಮನವಿ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಜಿಲ್ಲಾ ಗೌರವಾಧ್ಯಕ್ಷ ಎಸ್.ಬಿ ಕೇಸರಿ, ತಾಲೂಕಾ ಅಧ್ಯಕ್ಷ ಅಜೀತ ಕುಮಾರ ದೇಸಾಯಿ, ತಾಲೂಕಾ ಪ್ರಧಾನ ಕಾರ್ಯದರ್ಶಿಗಳಾದ, ಎನ್.ಎಸ್ ಕಮ್ಮಾರ, ಉಪಾಧ್ಯಕ್ಷ ರಾಜೇಸಾಬ ಮುನವಳ್ಳಿ, ಬಿಆರ್‍ಪಿ ಬಸವರಾಜ ದೇಸೂರ, ಸಿಆರ್ ಪಿ ಎಮ್ ಡಿ ಹೊಸಮನಿ, ಎ.ಎ.ಚಕೋಲಿ ವಿವಿಧ ಹಂತದ ಪದಾಧಿಕಾರಿಗಳಾದ ಕೆ.ಎಂ ಬೊಂಗಾಳೆ, ಅಶೋಕ್ ಕುರ್ತಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next