ಬೆಂಗಳೂರು: ಮಾಲಿನ್ಯ ನಿಯಂತ್ರಣ ಮತ್ತು ನಿರ್ವಹಣೆಗೆ ರಚಿಸ ಲಾಗಿರುವ ಶಾಸನಬದ್ಧ ಸಂಸ್ಥೆಯಾಗಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ)ಯ ಅಧ್ಯಕ್ಷ ಹು¨ªೆಯ ನೇಮಕಾತಿ ರಾಜಕೀಯ ನೇಮಕಾತಿ’ ಅಥವಾ ರಾಜಕೀಯ ಪುನರ್ವಸತಿ ಕೇಂದ್ರ’ ಆಗುವುದಕ್ಕೆ ಇನ್ನು ಮುಂದೆ ಅವಕಾಶವಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಹೈ ಕೋರ್ಟ್ ಚಾಟಿ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಕರ್ನಾ ಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ, ಸದಸ್ಯರು ಹಾಗೂ ಸದಸ್ಯ ಕಾರ್ಯ ದರ್ಶಿಯ ನೇಮಕಾತಿಗೆ ಮಾರ್ಗಸೂಚಿಗಳನ್ನು ರಚಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಮಾರ್ಗಸೂಚಿಗಳನ್ನು ರಚಿಸುವ ವಿಚಾರವಾಗಿ ಕಳೆದ ನಾಲ್ಕೈದು ವರ್ಷಗಳಿಂದ ನಡೆದ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ಮಂಡಳಿಯ ಅಧ್ಯಕ್ಷರ ನೇಮಕಾತಿ ಮಾರ್ಗಸೂಚಿಗಳನ್ನು ರಚಿಸುವಂತೆ 2017ರಲ್ಲಿ ಸುಪ್ರಿಂಕೋರ್ಟ್ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ವಿಚಾರವಾಗಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಸಾಕಷ್ಟು ಬಾರಿ ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ- 1974ರನ್ವಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಪರಿಸರ ವಿಷಯದಲ್ಲಿ ಅಪಾರ ಅನುಭವ, ಶೈಕ್ಷಣಿಕ ಅರ್ಹತೆ ಇದ್ದವ ರಿಗೆ ಮಾತ್ರ ನೇಮಕ ಮಾಡಲು ಅವಕಾಶವಿದೆ. ಅದರಂತೆ, ಪರಿಸರ ವಿಜ್ಞಾನದಲ್ಲಿ ಮಾನ್ಯತೆ ಪಡೆದ ವಿವಿಯಿಂದ ಸ್ನಾತ ಕೋತ್ತರ ಪದವಿ ಅಥವಾ ತತ್ಸಮಾನ ಪದವಿ ಹೊಂದಿ ದವರು ಮತ್ತು 56 ವರ್ಷ ಮೀರದ ವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಹೊಂದಿರುತ್ತಾರೆ ಎಂದು ಜೂ.19ರಂದು ಪ್ರಕಟಿಸಲಾಗಿರುವ ಗೆಜೆಟ್ ಅಧಿಸೂಚನೆ ತಿಳಿಸಲಾಗಿದೆ.
ಸಿಎಂ ನೇತೃತ್ವದ ಸಮಿತಿ: ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿ ಆಯ್ಕೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪರಿಸರ ಇಲಾಖೆ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನೊಳಗೊಂಡ ಸಮಿತಿ ಇರಲಿದೆ. ಕಾನೂನು ರೀತಿ ಅರ್ಜಿ ಆಹ್ವಾನಿಸಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಮಾನದಂಡ ಆಧರಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ರಾಜಕೀಯ ಪುನರ್ವಸತಿ: ಮಾಲಿನ್ಯ ನಿಯಂತ್ರಣ ಮತ್ತು ನಿರ್ವಹಣೆಗೆ 1974ರಲ್ಲಿ ಅಸ್ತಿತ್ವಕ್ಕೆ ಬಂದ ಕೆಎಸ್‌ಪಿಸಿಬಿಗೆ 4 ದಶಕಗಳ ಇತಿಹಾಸವಿದೆ. ಬಹುತೇಕ ಸಂದರ್ಭಗಳಲ್ಲಿ ಇದರ ಅಧ್ಯಕ್ಷರ ಆಯ್ಕೆ ಅಡಳಿತಾರೂಢ ಪಕ್ಷದ ನಿಷ್ಟರು ಅಥವಾ ಅವಕಾಶ ವಂಚಿತರಿಗೆ ಪುನರ್ವಸತಿ ಕಲ್ಪಿಸುವ ರಾಜಕೀಯ ನೇಮಕಾತಿ ಆಗಿರುತ್ತಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ ಬಳಿಕ ಸರ್ಕಾರ ಕಾನೂನು ಇಕ್ಕಟ್ಟಿಗೆ ಸಿಲುಕಿತು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಡಾ. ಸುಧಾಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಕೋರ್ಟಿನಲ್ಲಿ ಪ್ರಶ್ನಿಸಿದ್ದರಿಂದ ಅವರು ರಾಜೀನಾಮೆ ಕೊಟ್ಟಿದ್ದರು. ಬಿಜೆಪಿ ಸರ್ಕಾರದಲ್ಲಿ ಡಾ. ಸುಧೀಂದ್ರರಾವ್ ಅವರನ್ನು ನೇಮಕ ಮಾಡ ಲಾಯಿತು. ಹೈಕೋರ್ಟ್ ತರಾಟೆಗೆ ತೆಗೆದು ಕೊಂಡಿದ್ದರಿಂದ ಸರ್ಕಾರ ನೇಮಕಾತಿ ಆದೇಶ ವಾಪಸ್ ಪಡೆದುಕೊಂಡಿತ್ತು. ಇದೀಗ ಮಾರ್ಗಸೂಚಿಯಿಂದ ರಾಜಕೀಯ ನೇಮಕಕ್ಕೆ ಬ್ರೇಕ್ ಬೀಳಲಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿರುವು ದರಿಂದ ಈ ವಿಚಾರವಾಗಿ ನಾನು ಸೇರಿ ದಂತೆ ಹಲವರು ನಡೆಸಿದ ಮರ್ನಾಲ್ಕು ವರ್ಷಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಮುಂದೆ ನ್ಯಾಯಾಲಯದ ಕೆಂಗೆಣ್ಣಿಗೆ ಗುರಿಯಾಗಬೇಕಾದೀತು ಎಂಬ ಎಚ್ಚರಿಕೆ ಸರ್ಕಾರಕ್ಕಿರಬೇಕು’.
-ಎಸ್. ಉಮಾಪತಿ, ಹೈಕೋರ್ಟ್ ವಕೀಲ
* ರಫೀಕ್ ಅಹ್ಮದ್