ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವೈಖರಿ ತಿಳಿಸಲು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಕ್ರಮದ ಬಗ್ಗೆೆ ಮಾಹಿತಿಯನ್ನು ಒಂದೇ ಸೂರಿನಡಿ ಪರಿಚಯಿಸುವ ಉದ್ದೇಶದಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯು ‘ಕೆಎಸ್‌ಪಿಸಿಬಿ ಆ್ಯಪ್’ ಪರಿಚಯಿಸಲು ಮುಂದಾಗಿದೆ.
ರಾಜ್ಯದಲ್ಲಿ ಗಾಳಿ ಗುಣ್ಣಮಟ್ಟ ತಿಳಿದುಕೊಳ್ಳುವ ಉದ್ದೇಶದಿಂದ ಅಳವಡಿಸಲಾಗಿರುವ ಗಾಳಿ ಸೂಚ್ಯಂಕ ಗುಣಮಟ್ಟ ಮಾಪನ, ಮಂಡಳಿಯ ಕಾಯ್ದೆ, ನಿಯಮ, ಸುತ್ತೋಲೆ , ಅಧಿಕಾರಿಗಳ ವಿವರ, ದೂರು ಹಾಗೂ ಸಲಹೆಗಳ ಮೂಲಕ ಮಂಡಳಿ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಆ್ಯಪ್ ಸಹಾಕಾರಿ ಆಗಲಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ತಿಳಿಸಿದರು.
ಇದನ್ನೂ ಓದಿ:ಬಾಯಿಹುಣ್ಣಿಗೆ ಔಷಧಿ ಬದಲು ಕಳೆ ನಾಶಕ ಸೇವನೆ: ಗ್ರಾಮ ಪಂಚಾಯತ್ ಅಭ್ಯರ್ಥಿಯ ಸಾವು
ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಉದ್ದಿಮೆಗಳು ರಾಜ್ಯ ಮಾಲಿನ್ಯ ನಿಯಂತ್ರಣ ವ್ಯವಸ್ಥೆೆಗೆ ಒಳಪಟ್ಟಿವೆ. ನೂತನ ಆ್ಯಪ್‌ನ ಮೂಲಕ ಕೈಗಾರಿಕೆಗಳ ಮಾಲೀಕರು ಹಾಗೂ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಆ್ಯಪ್ ಅಭಿವೃದ್ಧಿಪಡಿಸಲು ಜಿಪಿಎಸ್ ತಂತ್ರಜ್ಞಾನ ಸಹ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ (ಡಿ.29ಕ್ಕೆೆ) ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಆ್ಯಪ್ ಬಿಡುಗಡೆ ಮಾಡಲಿದ್ದಾಾರೆ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.