Advertisement

KSN Rajesh Case: ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾವಣೆ

09:56 PM Feb 28, 2024 | Team Udayavani |

ಮಂಗಳೂರು: ನಗರದ ವಕೀಲ ಕೆಎಸ್‌ಎನ್‌ ರಾಜೇಶ್‌ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯವು ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶಿಸಿದೆ.

Advertisement

ಕೆಎಸ್‌ಎನ್‌ ರಾಜೇಶ್‌ ತನ್ನ ಕಚೇರಿಯಲ್ಲಿದ್ದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಎಸಿಪಿಯಾಗಿದ್ದ ರಂಜಿತ್‌ ಕುಮಾರ್‌ ಭಂಡಾರು ಅವರು ಕೆಎಸ್‌ಎನ್‌ ರಾಜೇಶ್‌, ಆತ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಬೋಂದೆಲ್‌ ನಿವಾಸಿ ಅನಂತ್‌ ಭಟ್‌, ಬೆಂಗಳೂರು ನಿವಾಸಿ ಆದಿತ್ಯ ಕೆ.ಬಿ. ಮತ್ತು ರಾಜೇಶ್‌ ಪತ್ನಿ ಶಶಿಕಲಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಒಟ್ಟು 110 ಸಾಕ್ಷಿಗಳನ್ನು ವಿಚಾರಿಸಿ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪಣ ಪಟ್ಟಿಯನ್ನು ಎಸಿಪಿ ದಿನಕರ್‌ ಶೆಟ್ಟಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕೆಎಸ್‌ಎನ್‌ ರಾಜೇಶ್‌ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಿವಂತೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿ ಕೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಅವರು ರಿಟ್‌ ಅರ್ಜಿಯನ್ನು ವಜಾಗೊಳಿಸಿ ಪ್ರಕರಣವು ವಿಚಾರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಬೇಕು ಎಂದು ಆದೇಶಿಸಿದ್ದರು.

ಇದೊಂದು ಘೋರ ಪ್ರಕರಣವಾಗಿದ್ದು ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಬೇಕಾದ ಕಾರಣ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್‌ ನ್ಯಾಯಾಯಲಕ್ಕೆ ವರ್ಗಾವಣೆಗೊಳಿಸಿ ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ತಾರಾ ಅವರು ಆದೇಶಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕಿ ಗೀತಾಶೆಟ್ಟಿ ಅವರು ಸರಕಾರದ ಪರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next