Advertisement

ಶ್ರೀಛತ್ರಪತಿ ಶಿವಾಜಿ ಮೂರ್ತಿಗೆ ಮತ್ತು ಸಂಗೋಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಕ್ಷೀರಾಭಿಷೇಕ

01:50 PM Dec 20, 2021 | Team Udayavani |

ದಾಂಡೇಲಿ : ನಗರದ ಶ್ರೀಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಆಶ್ರಯದಲ್ಲಿ ನಗರದ ಸೋಮಾನಿ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮೂರ್ತಿಗೆ ಮತ್ತು ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಕ್ಷೀರಾಭಿಷೇಕ  ಮತ್ತು ಮಾಲಾರ್ಪಣೆ ಮಾಡುವ ಕಾರ್ಯಕ್ರಮವನ್ನು ಭಾನುವಾರ ಸಂಜೆ ಆಯೋಜಿಸಲಾಗಿತ್ತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಭಜರಂಗ ದಳದ ಜಿಲ್ಲಾ ಸುರಕ್ಷಾ ಪ್ರಮುಖರಾದ ಚಂದ್ರು ಮಾಳಿ, ಮಾಜಿ ನಗರ ಸಭಾ ಸದಸ್ಯ ರಾಮಲಿಂಗ ಜಾಧವ ಮತ್ತು ನ್ಯಾಯವಾದಿ ರಾಘವೇಂದ್ರ ಗಡೆಪ್ಪನವರ ಬೆಳಗಾವಿಯಲ್ಲಿ ಎಂ.ಇ.ಎಸ್ ಸಂಘಟನೆಯ ಪುಂಡಾಟಿಕೆ ತೀವ್ರ ಖಂಡನೀಯ. ಕನ್ನಡದ ನೆಲದಲ್ಲಿ ಜನ್ಮವೆತ್ತು, ಕನ್ನಡದ ನೆಲದಲ್ಲಿ ಬಾಳಿ ಬದುಕಿ ಕನ್ನಡದ ನೆಲಕ್ಕೆ ಅಪಚಾರವೆಸಗುವ ಎಂ.ಇ.ಎಸ್ ಸಂಘಟನೆಯ ಕುಕೃತ್ಯ ತೀವ್ರ ಖಂಡನೀಯ. ಈ ನಾಡಿನ ಜನರು ಜಾತಿ, ಮತ, ಧರ್ಮ, ಭಾಷೆ ಎಂದು ಬೇಧಭಾವ ಮಾಡದೇ ಸಾಮರಸ್ಯದಿಂದ ಜೀವನ ನಡೆಸುತ್ತಿರುವಾಗ ಎಂ.ಇ.ಎಸ್ ಸಂಘಟನೆ ಹೇಯಕೃತ್ಯಗಳ ಮೂಲಕ ಸಮಾಜದ ಶಾಂತಿಕದಡುವ ಕೆಲಸ ಮಾಡುತ್ತಿದೆ. ಇಂಥಹ ನಾಡದ್ರೋಹಿ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಹಾಗೂ ಹಿಂದವಿ ಸಮಾಜದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಯನ್ನು ನಾವೆಂದು ಸಹಿಸಲಾರೆವು. ಇಂಥಹ ಹೇಯಕೃತ್ಯವೆಸಗಿದವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಾಯಿ ಭುವನೇಶ್ವರಿಯ ಪುಣ್ಯದ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ನಾವೆಲ್ಲರೂ ನಾಡು, ನುಡಿ, ಭಾಷೆಯ ವಿಚಾರ ಬಂದಾಗ ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಕಟಿಬದ್ದರಾಗಬೇಕಾಗಿದೆ. ದುಷ್ಕೃತ್ಯವನ್ನು ಮಾಡುತ್ತಿರುವ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಜಾಧವ, ಸಮಿತಿಯ ಪ್ರಮುಖರುಗಳಾದ ನಗರ ಸಭಾ ಸದಸ್ಯ ಬುದ್ದಿವಂತ ಗೌಡ ಪಾಟೀಲ, ರವಿ ಸುತಾರ್, ವಿಜಯ ಮಿರಾಶಿ, ಚಂದನ್ ಮೋರೆ, ಶ್ರೀನಾಥ್ ಮಿರಾಶಿ, ಕೃಷ್ಣ ಗೌಡ, ಗಿರೀಶ ಕುಟ್ಟೂಲ್ಕರ್, ಹರೀಶ ಕುಟ್ಟೂಲ್ಕರ್, ಸಂದೀಪ್ ಸಿದ್ದಾನಿ, ನವೀನ್ ಧರೇಕರ, ರವಿ ಗೌಡ, ಸಂತೋಷ ತಾಂಬುಡಾ, ಮಂಜುನಾಥ ಹುಲ್ಕುಪ್ಕರ್, ಪ್ರಶಾಂತ ಹುಲ್ಕುಪ್ಕರ್, ದೀಪಕ್ ಸಾವಂತ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸುಧೀರ ಶೆಟ್ಟಿ, ಚೆನ್ನಪ್ಪ ಮುರುಗೋಡ, ಶ್ರೀರಾಂ ಪಾಟೀಲ, ಶ್ರೀನಿವಾಸ ಬಬುಲು ಪಾಟೀಲ, ನಾಗರಾಜ ಅನಂತಪುರ, ಲಿಂಗಯ್ಯ ಪೂಜಾರ, ಸಂಜೀವ್ ಜಾಧವ್, ಪ್ರಮೋಧ ಕದಂ ಮೊದಲಾದವರು ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next