Advertisement
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ರೈತರೊಂದಿಗೆ ಬೆಳೆ ಹಾನಿ ವೀಕ್ಷಣೆ ಮಾಡುತ್ತಿದ್ದ ವೇಳೆ ಸ್ಥಳದಲ್ಲಿದ್ದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೈತರು ಮಳೆ, ಬೆಳೆ ಇಲ್ಲದೇ ಭೀಕರ ಸಂಕಷ್ಟ ಎದುರಿಸುತ್ತಿದ್ದಾರೆ. ವಿಜಯಪುರಕ್ಕೆ ಎಷ್ಟು ಬಾರಿ ಬರ ಅಧ್ಯಯನ ಮಾಡುತ್ತೀರಿ. ಎಷ್ಟು ರೈತರಿಗೆ ಪರಿಹಾರ ಕೊಡಿಸಿದ್ದೀರಿ ಎಂದು ಕಿಡಿಕಾರಿದರು. ಈ ಹಂತದಲ್ಲಿ ಈಶ್ವರಪ್ಪ ಕಾರು ಏರಿ ಹೊರಡಲು ಅನುವಾದರು. ಆಗ ಸ್ಥಳದಲ್ಲಿದ್ದ ಓರ್ವ ರೈತ, ಬಿಜೆಪಿ ತೊರೆದಿರುವ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರನ್ನು ಪಕ್ಷಕ್ಕೆ ಮರಳಿ ಕರೆ ತರಬೇಕು ಎಂದಾಗ ರೈತ ಮುಖಂಡ ಕುಲಕರ್ಣಿ, ಯಾವ ರಾಜಕೀಯ ನಾಯಕನನ್ನು ಕರೆ ತಂದು ಏನು ಮಾಡಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು, ನಾಯಕರ ಸ್ಥಿತಿ ಇದೆ ಆಗಿದೆ. ರೈತ ಸಂಕಷ್ಟದಲ್ಲಿದ್ದರೆ ಇವರೆಲ್ಲ ಪಕ್ಷಬೇಧ ಇಲ್ಲದೇ ರೆಸಾರ್ಟ್‌ನಲ್ಲಿ ಕುಳಿತು ಮೋಜು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
Related Articles
Advertisement
ರಾಜ್ಯದಲ್ಲಿ ಭೀಕರ ಬರವಿದ್ದರೂ ಸರ್ಕಾರ ಕ್ರಮಕೈಗೊಂಡಿಲ್ಲ. ಎಲ್ಲ ಸಚಿವರು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಕ್ಷೇತ್ರಗಳ ಕಡೆ ಗಮನ ಹರಿಸುತ್ತಿಲ್ಲ. ನಾವು ಬರ ಅಧ್ಯಯನ ಮಾಡಿ ಬಜೆಟ್ ಅಧಿವೇಶನದಲ್ಲಿ ಜನರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ● ಬಿ. ಶ್ರೀರಾಮುಲು, ಶಾಸಕ
‘ನಡೆದಾಡುವ ದೇವರು’ ಶಿವಕುಮಾರ ಸ್ವಾಮೀಜಿಯವರಿಗೆ ‘ಭಾರತ ರತ್ನ’ ದೊರೆಯದಿರುವುದು ನೋವು ತಂದಿದೆ. ಸಿದ್ಧಗಂಗಾ ಶ್ರೀಗಳಿಗೆ ‘ಭಾರತ ರತ್ನ’ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಈ ವಿಚಾರದಲ್ಲಿ ರಾಜ್ಯಕ್ಕೆ ಮೋದಿ ಸರ್ಕಾರ ತಾರತಮ್ಯ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ● ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ