Advertisement

ಭಟ್ಕಳದಿಂದ ಬಜಪೆ ವಿಮಾನ ನಿಲ್ದಾಣಕ್ಕೆ  ಕೆಎಸ್ಸಾರ್ಟಿಸಿ ವೋಲ್ವೊ

08:39 AM Oct 27, 2017 | |

ಮಂಗಳೂರು: ಭಟ್ಕಳದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವವರು ಇನ್ನು ಕಷ್ಟಪಡಬೇಕಿಲ್ಲ. ಮುಂದಿನ ಮಾರ್ಚ್‌ ವೇಳೆಗೆ ವೋಲ್ವೋ ಬಸ್‌ ಸಂಪರ್ಕ ಕಲ್ಪಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಚಿಂತನೆ ನಡೆಸಿದೆ. ಆ ಮೂಲಕ ಭಟ್ಕಳ, ಕುಂದಾಪುರ, ಉಡುಪಿ, ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಂಸ್ಥೆ ಮುಂದಾಗಿದೆ.

Advertisement

ಈ ಸಂಬಂಧ ಕೆಎಸ್‌ಆರ್‌ಟಿಸಿ ಈಗಾಗಲೇ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ಜತೆೆಗೆ ಮಾತುಕತೆ ನಡೆಸಿದೆ. ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಮೌಖೀಕ ಸಮ್ಮತಿ ಕೂಡ ದೊರೆತಿದೆ. ಒಂದೆರಡು ತಿಂಗಳಲ್ಲಿ  ಆದೇಶ ಹೊರ ಬರಲಿದ್ದು, ಇದಾದ ಬಳಿಕ ಬಸ್‌ ಸಂಚಾರಕ್ಕೆ ರೂಪುರೇಷೆ ಸಿದ್ಧವಾಗಲಿದೆ. 

ಸದ್ಯದ ಲೆಕ್ಕಾಚಾರದಂತೆ ವೋಲ್ವೊ ಬಸ್‌ಗಳು ಬಜಪೆಯಿಂದ ಮಣಿ ಪಾಲ- ಉಡುಪಿ-ಕುಂದಾಪುರ ಮಾರ್ಗ ವಾಗಿ ಭಟ್ಕಳಕ್ಕೆ ಸಂಚರಿಸಲಿವೆ. ಆದರೆ ಈ ಮಾರ್ಗದಲ್ಲಿ ಎಷ್ಟು ಬಸ್‌ ಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸ ಲಾಗುತ್ತದೆ, ಪ್ರಯಾಣ ದರ ಹಾಗೂ ನಿಲುಗಡೆ ಹಾಗೂ ವೇಳಾಪಟ್ಟಿ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಈ ವಿಚಾರ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳ ಜತೆಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿ ಎಲ್ಲವನ್ನೂ ಅಂತಿಮಗೊಳಿಸಲು ಕೆಎಸ್‌ಆರ್‌ಟಿಸಿ ಸಂಸ್ಥೆಯವರು ತೀರ್ಮಾನಿಸಿದ್ದಾರೆ.

ಟ್ಯಾಕ್ಸಿಗೆ ಹೋಲಿಸಿದರೆ ದರ ಕಡಿಮೆ
ಸದ್ಯ ವಿಮಾನ ನಿಲ್ದಾಣ ದಿಂದ ಉಡುಪಿ, ಮಣಿ ಪಾಲ, ಕುಂದಾಪುರಕ್ಕೆ ಆಗಮಿಸ ಬೇಕಾ  ದರೆ ಸ್ಥಳೀಯ ಟ್ಯಾಕ್ಸಿ ಸೇವೆ ಪಡೆದು  ಕೊಳ್ಳ ಬೇಕು. ಟ್ಯಾಕ್ಸಿಯವರು  4ರಿಂದ 5 ಸಾವಿರ ರೂ. ಬಾಡಿಗೆ ಪಡೆದು ಕೊಳ್ಳುತ್ತಾರೆ. ವೊಲ್ವೋ ಬಸ್‌ ಸೇವೆ ಯಿಂದ ವಿಮಾನ ನಿಲ್ದಾಣಕ್ಕೆ 600 ರೂ. ಗಿಂತಲೂ ಕಡಿಮೆ ಖರ್ಚಿ ನಲ್ಲಿ ಸಂಚಾರ ನಡೆಸಬಹುದು. ಇನ್ನು ಮಂಗಳೂರಿನ ಬಿಜೈ ಬಸ್‌ ನಿಲ್ದಾಣ ದಿಂದ ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ವೋಲ್ವೋ ಸೇವೆ ಜಾರಿಗೆ ಸಿದ್ಧವಾಗಿದೆ. ಈ ಬಸ್‌ ಕೆಪಿಟಿ, ಬೋಂದೆಲ್‌, ಕಾವೂರು ಮೂಲಕ ವಿಮಾನ ನಿಲ್ದಾಣಕ್ಕ ಸಂಚರಿಸಲಿದೆ.

ಭಟ್ಕಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ ಸೇವೆ ಪ್ರಾರಂಭಿಸಲು ಚಿಂತನೆ ನಡೆಸು ತ್ತಿದ್ದೇವೆ. ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆಗೂ ಸಮಾ ಲೋಚನೆ ನಡೆಸುತ್ತಿದ್ದೇವೆ. ಮಾರ್ಚ್‌ ವೇಳೆಗೆ ಬಸ್‌ ಸೇವೆ ಪ್ರಾರಂಭಿಸಲು ಉದ್ದೇ ಶಿಸ ಲಾಗಿದೆ. ಇದರಿಂದ ನಿತ್ಯ ಪ್ರಯಾ ಣಿಕರಿಗೂ ಅನುಕೂಲವಾಗಲಿದೆ.      
ದೀಪಕ್‌ ಕುಮಾರ್‌, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಅಧಿಕಾರಿ

Advertisement

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next